Home ಸುದ್ದಿ ರಾಜ್ಯ 35 ಐಪಿಎಸ್ ಅಧಿಕಾರಿಗಳ ವರ್ಗಾವಣೆ

35 ಐಪಿಎಸ್ ಅಧಿಕಾರಿಗಳ ವರ್ಗಾವಣೆ

0

ಬೆಂಗಳೂರು: ರಾಜ್ಯ ಸರಕಾರ 35 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಮತ್ತು ಆಡಳಿತ ಸುಧಾರಣೆಯ ಭಾಗವಾಗಿ, ಅಧಿಕಾರಿಗಳನ್ನು ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದ್ದು, ಅಪರಾಧ, ಸಂಚಾರ ಸೇರಿದಂತೆ ಬೆಂಗಳೂರಿನ ವಿವಿಧ ವಿಭಾಗಗಳಲ್ಲಿರುವ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ಈ ಹಿಂದೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್​​ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ್ದ ಕಾಲ್ತುಳಿತದ ಪ್ರಕರಣ ನಂತರ ಹಲವು ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದ ರಾಜ್ಯ ಸರ್ಕಾರ, ಇದೀಗ ಮತ್ತೊಮ್ಮೆ ಇಲಾಖೆಗೆ ಭರ್ಜರಿ ಸರ್ಜರಿ ಮಾಡಿದೆ.

ಪ್ರತಿಪಕ್ಷಗಳಿಂದ ಕಾನೂನು ಸುವ್ಯವಸ್ಥೆಯ ಕುರಿತು ನಿರಂತರ ಆರೋಪಗಳು ಕೇಳಿಬರುತ್ತಿರುವ ಹಾಗೂ ರಾಜ್ಯದ ಜೈಲುಗಳಲ್ಲಿ ನಡೆಯುತ್ತಿರುವ ಅಕ್ರಮಗಳ ಸರಣಿ ವರದಿಗಳ ನಡುವೆಯೇ ಈ ಬೃಹತ್ ವರ್ಗಾವಣೆ ನಡೆದಿದೆ,

ಐಪಿಎಸ್ ಅಧಿಕಾರಿಗಳ ವರ್ಗಾವಣೆ ವಿವರ (ವರ್ಗ ಮಾಡಿರುವ ಹುದ್ದೆ)
ಅಕ್ಷಯ್ ಮಚೀಂದ್ರ – ಡಿಸಿಪಿ, ಬೆಂಗಳೂರೂ ಕೇಂದ್ರ ವಿಭಾಗ
ಅಜಯ್ ಹಿಲೋರಿ – ಜಂಟಿ ಪೊಲೀಸ್ ಆಯುಕ್ತ, ಅಪರಾಧ ವಿಭಾಗ
ಪರಶುರಾಮ್ – ಡಿಸಿಪಿ, ವೈಟ್ ಫೀಲ್ಡ್ ವಿಭಾಗ
ಕಾರ್ತಿಕ್ ರೆಡ್ಡಿ – ಜಂಟಿ ಪೊಲೀಸ್ ಆಯುಕ್ತ, ಸಂಚಾರ ವಿಭಾಗ
ಅನೂಪ್ ಶೆಟ್ಟಿ – ಬೆಂಗಳೂರು ಪಶ್ಚಿಮ ವಿಭಾಗ ಡಿಸಿಪಿ, ಸಂಚಾರ
ಶಿವಪ್ರಕಾಶ್ ದೇವರಾಜು – ಲೋಕಾಯುಕ್ತ ಎಸ್​ಪಿ, ಬೆಂಗಳೂರು
ಜಯಪ್ರಕಾಶ್ – ಬೆಂಗಳೂರು ಉತ್ತರ ಸಂಚಾರ ವಿಭಾಗ, ಡಿಸಿಪಿ
ಎಂ.ನಾರಾಯಣ್ – ಎಲೆಕ್ಟ್ರಾನಿಕ್ ಸಿಟಿ ವಿಭಾಗ, ಡಿಸಿಪಿ
ಅನಿತಾ.ಬಿ ಹದ್ದಣ್ಣನವರ್ – ಬೆಂಗಳೂರು ಆಗ್ನೇಯ ವಿಭಾಗ ಡಿಸಿಪಿ
ಸೈದಲು ಅಡಾವತ್ – ಸಿಐಡಿ, ಎಸ್​​ಪಿ
ಬಾಬಾ ಸಾಬ್ ನ್ಯಾಮಗೌಡ – ಬೆಂಗಳೂರು ಉತ್ತರ ವಿಭಾಗ, ಡಿಸಿಪಿ
ನಾಗೇಶ್ – ಬೆಂಗಳೂರು ವಾಯುವ್ಯ ವಿಭಾಗ, ಡಿಸಿಪಿ
ಶ್ರೀಹರಿ ಬಾಬು – ಬೆಂಗಳೂರು ಸಿಸಿಬಿ ಡಿಸಿಪಿ
ಸೌಮ್ಯಲತಾ – ಸಿಎಆರ್ ಹೆಡ್ ಕ್ವಾರ್ಟರ್ಸ್, ಡಿಸಿಪಿ
ಎಂ.ಎನ್.ಅನುಚೇತ್ – ಡಿಐಜಿ ನೇಮಕಾತಿ ವಿಭಾಗ
ವರ್ತಿಕಾ ಕಟೀಯಾರ್ – ಬಳ್ಳಾರಿ ವಲಯ, ಡಿಐಜಿ
ಶಾಂತರಾಜು – ಎಸ್​​ಪಿ, ಗುಪ್ತಚರ ಇಲಾಖೆ
ಸಿರಿಗೌರಿ – ಎಸ್​​ಪಿ, ರಾಜ್ಯ ಅಪರಾಧ ದಾಖಲೆ ವಿಭಾಗ
ಸುಮನ್.ಡಿ ಪೆನ್ನೆಕರ್ – ಡಿಸಿಪಿ, ಇಂಟಲಿಜೆನ್ಸ್
ಸಿಮಿ ಮರೀಯ ಜಾರ್ಜ್– ಡಿಸಿಪಿ, ದಕ್ಷಿಣ ವಿಭಾಗ ಸಂಚಾರ
ವೈ.ಅಮರನಾಥ್ – ಕಮಾಂಡೆಂಟ್ ಫಸ್ಟ್ ಬೆಟಾಲಿಯನ್ KSRP
ಯಶೋಧ ವಟ್ಟಗೋಡಿ – ಎಸ್​ಪಿ, ಹಾವೇರಿ
ಗುಂಜನ್ ಅರ್ಯಾ – ಎಸ್​ಪಿ, ಧಾರವಾಡ
ಎಂ.ಗೋಪಾಲ್ – ಜಂಟಿ ನಿರ್ದೇಶಕ, ಎಫ್​​ಎಸ್​ಎಲ್ ಬೆಂಗಳೂರು
ಸಿದ್ಧಾರ್ಥ ಗೋಯಲ್ – ಎಸ್​ಪಿ, ಬಾಗಲಕೋಟೆ
ರೋಹನ್ ಜಗದೀಶ್ – ಎಸ್​ಪಿ, ಗದಗ
ಶಿವಾಂಶು ರಜಪೂತ – ಎಸ್​ಪಿ, ಕೆಜಿಎಫ್
ಜಿತೇಂದ್ರ ಕುಮಾರ್ – ಡಿಸಿಪಿ ಕಾನೂನು ಸುವ್ಯವಸ್ಥೆ, ಮಂಗಳೂರು ನಗರ
ಎಂ.ಎನ್​​.ದೀಪನ್ – ಎಸ್​ಪಿ, ಉತ್ತರ ಕನ್ನಡ
ಎಸ್​.ಜಾನವಿ – ಎಸ್​ಪಿ, ವಿಜಯನಗರ
ಚಂದ್ರಗುಪ್ತ – ಐಜಿಪಿ, ಈಶಾನ್ಯ ಕಲಬುರಗಿ
ಇಡಾ ಮಾರ್ಟಿನ್ ಮಾರ್ಬಾನಿಯಾಂಗ್ – ಡಿಐಜಿ, ಬೆಂಗಳೂರು ಪೊಲೀಸ್ ಹೆಡ್​ಕ್ವಾರ್ಟರ್ಸ್
ಕಾರ್ತಿಕ್ ರೆಡ್ಡಿ – ಡಿಐಜಿ, ಜಂಟಿ ಆಯುಕ್ತರು, ಬೆಂಗಳೂರು ಸಂಚಾರ ಪೊಲೀಸ್

NO COMMENTS

LEAVE A REPLY

Please enter your comment!
Please enter your name here

Exit mobile version