ಮುಂಬೈ: ಒಂದೇ ವೇದಿಕೆಯಲ್ಲಿ ಅತ್ಯಾಧುನಿಕ ಕಾರುಗಳು ಮತ್ತು ಫ್ಯಾಷನ್ ಪ್ರಪಂಚದ ಮೆರುಗು ಸಿಗಲಿದೆ. ಮುಂಬೈ ನಗರದಲ್ಲಿ ಆಗಸ್ಟ್ 3ರಂದು ಡೋಮ್ ಎಸ್‌ವಿಪಿ ಸ್ಟೇಡಿಯಂನಲ್ಲಿ ನಡೆಯಲಿರುವ ಫಾಸ್ಟ್ ಆಂಡ್ ಫ್ಯಾಬುಲಸ್ (Fast & Fabulous) ಕಾರ್ಯಕ್ರಮ ಕುತೂಹಲ ಮೂಡಿಸಿದೆ. ದೇಶ-ವಿದೇಶಗಳ 50ಕ್ಕೂ ಹೆಚ್ಚು ಅಪರೂಪದ ಹಾಗೂ ವಿಶಿಷ್ಟ ಸೂಪರ್‌ಕಾರುಗಳು ರ‍್ಯಾಂಪ್ ವಾಕ್ ಮಾಡಲಿವೆ.
ಭಾರತದ ಮೊಟ್ಟ ಮೊದಲ ‘ಸೂಪರ್‌ಕಾರ್ ಕ್ಯಾಟ್‌ವಾಕ್’ ಕಾರ್ಯಕ್ರಮ ಮುಂಬೈನಲ್ಲಿ ವರ್ಣರಂಜಿತವಾಗಿ, ಅದ್ಧೂರಿಯಾಗಿ ನಡೆಯಲಿದೆ. ಈ ವಿಶಿಷ್ಟ ಶೋನಲ್ಲಿ ವೇಗ, ಫ್ಯಾಷನ್, ಸಂಗೀತ ಮತ್ತು ಸಾಂಸ್ಕೃತಿಕ ವೈಭವಗಳ ಅದ್ಭುತ ಸಂಗಮವನ್ನು ನೋಡಬಹುದಾಗಿದೆ.
ಸೂಪರ್ ಕಾರ್ ಕ್ಯಾಟ್‌ವಾಕ್ ಎಂಬ ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಒಂದೇ ಕಡೆ ವೇಗದ ಮಂತ್ರ, ಮ್ಯೂಸಿಕ್, ಫ್ಯಾಷನ್ ಶೋ ಹಾಗೂ ಸೆಲೆಬ್ರಿಟಿಗಳ ಝಲಕ್ ಎಲ್ಲವೂ ಲಭ್ಯವಾಗಲಿದೆ. ಆಟೋಮೊಬೈಲ್ ಪ್ರಿಯರು ಹಾಗೂ ಫ್ಯಾಷನ್ ಅಭಿಮಾನಿಗಳಿಗೆ ಇದು ಮರೆಯಲಾರದ ಅನುಭವ ನೀಡಲಿದೆ.
ವೈಭವದ ಕಾರುಗಳು: ಇತ್ತೀಚೆಗೆ ಬಿಡುಗಡೆಯಾದ Ferrari, Lamborghini, Rolls Royce, Bentley, McLaren, Porsche, Aston Martin, Maserati, Maybach, Lotus, Dodge Hellcat, Jeep Rubicon, BMW i8 ಮುಂತಾದ ಕಾರುಗಳು ಈ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿವೆ. ಕಾರುಗಳ ಫ್ಯಾಷನ್ ಶೋ ಅಪೂರ್ವ ಅನುಭವ ನೀಡಲಿದೆ.
ಸೂಪರ್ ಕಾರುಗಳ ನಡುವೆ ದೇಶದ ಪ್ರಖ್ಯಾತ ಮ್ಯೂಸಿಕ್ ಡಿಜೆ ಸಹ ಇರಲಿದೆ. ಲೈವ್ ಶೋಗಳು ಹಾಗೂ ಫ್ಯಾಷನ್ ರನ್‌ವೇ ನಡೆಯಲಿದ್ದು, ಇದು ಕಾರು ಪ್ರಿಯರು ಮತ್ತು ಫ್ಯಾಷನ್ ತಜ್ಞರಿಗೆ ವಿಶಿಷ್ಟ ಅನುಭವವಾಗಲಿದೆ.
ಈಗಾಗಲೇ ಆನ್‌ಲೈನ್‌ನಲ್ಲಿ ಟಿಕೆಟ್‌ಗಳು ಲಭ್ಯವಿದ್ದು, ಮ್ಯೂಸಿಕ್ ಡಿಜೆ ಶೋಗಳಿಂದ ಹಿಡಿದು ಲೈವ್ ಪರ್ಫಾರ್ಮೆನ್ಸ್‌ಗಳವರೆಗೆ ಕಾರ್ಯಕ್ರಮದಲ್ಲಿ ವಿವಿಧ ಆಕರ್ಷಣೆಗಳಿರಲಿವೆ. ಇದು ಭಾರತೀಯ ಡ್ರೈವಿಂಗ್ ಮತ್ತು ಫ್ಯಾಷನ್ ಸಂಸ್ಕೃತಿಗೆ ಹೊಸ ಹಾದಿ ತೆರೆಯಲಿದೆ.
ಈ ಕಾರ್ಯಕ್ರಮದಲ್ಲಿ ಹಲವಾರು ಎಲೆಕ್ಟ್ರಿಕ್ ಸೂಪರ್ ಕಾರುಗಳನ್ನು ನೋಡಬಹುದು. Tesla Roadster, Rimac Nevera, Lotus Evija ಮುಂತಾದ ಶಕ್ತಿಯುತ ಎಲೆಕ್ಟ್ರಿಕ್ ಕಾರುಗಳು ಪೈಪೋಟಿಯ ನಡುವೆ ಅನೇಕರ ಗಮನ ಸೆಳೆಯಲಿವೆ. ಇದು ವೇಗದ ಜೊತೆಗೆ ಗ್ರೀನ್ ಮೊಬಿಲಿಟಿಗೆ ಒತ್ತು ನೀಡುವ ಮಾದರಿ ಕಾರ್ಯಕ್ರಮವಾಗಲಿದೆ.