Home ತಾಜಾ ಸುದ್ದಿ RCB ಅಭಿಮಾನಿಗಳ ಕಾಲ್ತುಳಿತ: ಪೊಲೀಸ್ ಕಮಿಷನರ್ ಸೇರಿ ಹಲವು ಅಧಿಕಾರಿಗಳ ಅಮಾನತು

RCB ಅಭಿಮಾನಿಗಳ ಕಾಲ್ತುಳಿತ: ಪೊಲೀಸ್ ಕಮಿಷನರ್ ಸೇರಿ ಹಲವು ಅಧಿಕಾರಿಗಳ ಅಮಾನತು

0

ಬೆಂಗಳೂರು: ಆರ್‌ಸಿಬಿ ವಿಜಯೋತ್ಸವ ಸಂದರ್ಭದಲ್ಲಿ  ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ 11 ಮಂದಿ ಕಾಲ್ತುಳಿತ ಸಾವಿನ ಘಟನೆಗೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಬೆಂಗಳೂರು ನಗರಕ್ಕೆ ಸಂಬಂಧಿಸಿದಂತೆ ಪೊಲೀಸ್‌ ಇಲಾಖೆ ಹಿರಿಯ ಅಧಿಕಾರಿಗಳನ್ನು ಅಮಾನತು ಮಾಡಿದ್ದಾರೆ, ತನಿಖೆಗೆ ಜಸ್ಟೀಸ್ ಮೈಕೆಲ್ ಕುಲಾ ನೇತೃತ್ವದಲ್ಲಿ ಏಕ ಸದಸ್ಯ ಆಯೋಗ ರಚನೆ ಮಾಡಲಾಗಿದೆ.
ಜೊತೆಗೆ, ತನಿಖೆಯನ್ನು ಸಿಐಡಿಗೆ ಸಹ ವಹಿಸಲಾಗಿದೆ.
ಆರ್ ಸಿ ಬಿ ಮೇಲೆ, ಇವೆಂಟ್ ಮ್ಯಾನೇಜರ್ ಮೇಲೆ, ಕರ್ನಾಟಕ ಸ್ಟೇಟ್ ಕ್ರಿಕೆಟ್ ಅಸೋಸಿಯೇಶನ್ ಮೇಲೆ ಪ್ರಕರಣ ದಾಖಲು, ಅವರ ಬಂಧನಕ್ಕೆ ಆದೇಶ ನೀಡಲಾಗಿದೆ.
ಕಬ್ಬನ್ ಪಾರ್ಕ್ ಠಾಣೆಯ ಇನಸ್ಪೆಕ್ಟರ್, ಎಸಿಪಿ, ಸೆಂಟ್ರಲ್ ಡಿಸಿಪಿ, ಕ್ರಿಕೆಟ್ ಸ್ಟೇಡಿಯಂ ಇನ್ ಚಾರ್ಜ್, ಹೆಚ್ಚುವರಿ ಪೊಲೀಸ್ ಆಯುಕ್ತ, ಪೊಲೀಸ್ ಕಮಿಷನರ್ ತಕ್ಷಣದಿಂದ ಅಮಾನತು ಮಾಡಲು ಆದೇಶ ನೀಡಲಾಗಿದೆ.

Exit mobile version