Home ಕೃಷಿ/ವಾಣಿಜ್ಯ MSP ಭರವಸೆ ನೀಡಿದ ರಾಹುಲ್

MSP ಭರವಸೆ ನೀಡಿದ ರಾಹುಲ್

0

ನವದೆಹಲಿ: ಸಂಯುಕ್ತ ಕಿಸಾನ್‌ ಮೋರ್ಚಾ ಹಾಗೂ ಕಿಸಾನ್‌ ಮಜ್ದೂರ್‌ ಸೇರಿ ಹಲವು ರೈತ ಸಂಘಟನೆಗಳ 12 ಮುಖಂಡರು ರಾಹುಲ್‌ ಗಾಂಧಿ ಅವರನ್ನು ಭೇಟಿಯಾಗಿ ಮನವಿ ಮಾಡಿದ್ದಾರೆ.
ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡುವ MSPಕಾನೂನು ಜಾರಿಗೊಳಿಸಬೇಕು, ರೈತರ ಬೇಡಿಕೆಗಳು ಸುದೀರ್ಘ ಅವಧಿಯಿಂದ ಬಾಕಿ ಉಳಿದಿವೆ. ಇವುಗಳನ್ನು ಈಡೇರಿಸಲು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಬೇಕು. ಕನಿಷ್ಠ ಬೆಂಬಲ ಬೆಲೆಯ ಕಾನೂನು ಜಾರಿಗೆ ತರಬೇಕು. ಅಷ್ಟೇ ಅಲ್ಲ, ಸಂಸತ್‌ ಅಧಿವೇಶನದಲ್ಲಿ ಎಂಎಸ್‌ಪಿ ಜಾರಿ ಕುರಿತು ಖಾಸಗಿ ವಿಧೇಯಕ ಮಂಡಿಸಬೇಕು ಎಂಬುದಾಗಿ ರೈತ ಮುಖಂಡರು ಮನವಿ ಮಾಡಿದ್ದಾರೆ. ಈ ಕುರಿತಂತೆ ರಾಹುಲ್‌ ಗಾಂಧಿ ಮಾತನಾಡಿ ಎಂಎಸ್‌ಪಿ ಕಾನೂನು ಜಾರಿಗಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ಇಂಡಿಯಾ ಒಕ್ಕೂಟದ ನಾಯಕರ ಜತೆ ಚರ್ಚಿಸಿ ಮುಂದಿನ ತೀರ್ಮಾಣ ತೆಗೆದುಕೊಳ್ಳಲಾಗುವುದು ಎಂದರು.

Exit mobile version