Home ಸುದ್ದಿ ರಾಜ್ಯ ರೈತರ ಗಮನಕ್ಕೆ: 2ನೇ ಬೆಳೆಗೆ ತುಂಗಭದ್ರಾ ಡ್ಯಾಂ ನೀರಿಲ್ಲ

ರೈತರ ಗಮನಕ್ಕೆ: 2ನೇ ಬೆಳೆಗೆ ತುಂಗಭದ್ರಾ ಡ್ಯಾಂ ನೀರಿಲ್ಲ

0

ಬೆಂಗಳೂರು: ರೈತರ ಗಮನಕ್ಕೆ ಪ್ರಮುಖವಾದ ಮಾಹಿತಿ ಒಂದಿದೆ. ಈ ವರ್ಷ ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗಿ ತುಂಗಭದ್ರಾ ಡ್ಯಾಂ ಭರ್ತಿಯಾಗಿದೆ ಆದರೆ ಈ ವರ್ಷ 2ನೇ ಬೆಳೆಗೆ ತುಂಗಭದ್ರಾ ಡ್ಯಾಂ ನೀರು ಸಿಗುವುದಿಲ್ಲ ಎಂದು ಸರ್ಕಾರ ಹೇಳಿದೆ.

ವಿಧಾನಸಭೆಯ ಅಧಿವೇಶನದಲ್ಲಿ ತುಂಗಭದ್ರಾ ಅಣೆಕಟ್ಟೆ ಸಂಬಂಧ ಚರ್ಚೆಗೆ ಉತ್ತರ ನೀಡಿದ ಜಲಸಂಪನ್ಮೂಲ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಈ ಕುರಿತು ಮಾಹಿತಿ ನೀಡಿದ್ದಾರೆ.

ತುಂಗಭದ್ರಾ ಡ್ಯಾಂ ಎಲ್ಲ ಗೇಟ್ ಹೊಸದಾಗಿ ನಿರ್ಮಾಣ ಶುರುವಾಗಿದೆ. ಆದ್ದರಿಂದ 2ನೇ ಬೆಳೆಗೆ ನೀರಿಲ್ಲ. ತಜ್ಞರ ಸಲಹೆಯಂತೆ 1626 ಅಡಿ ನೀರು ಸಂಗ್ರಹ ಮಾಡಲಾಗುತ್ತದೆ ಎಂದು ಹೇಳಿದ್ದಾರೆ. ಹೊಸಪೇಟೆಯ ತುಂಗಭದ್ರಾ ಅಣೆಕಟ್ಟೆಯ ಎಲ್ಲ 39 ಗೇಟ್‌ಗಳನ್ನು ಹೊಸದಾಗಿ ಅಳವಡಿಸುವ ಕಾರ್ಯಕ್ಕೆ ಈಗಾಗಲೇ ಚಾಲನೆ ನೀಡಲಾಗಿದ್ದು, 2026ರ ಜೂನ್ ವೇಳೆಗೆ ಪೂರ್ಣಗೊಳ್ಳಲಿದೆ.

ಹೀಗಾಗಿ ಅಣೆಕಟ್ಟೆ ಉಳಿಸಿಕೊಳ್ಳಬೇಕಾದರೆ ಹೊಸ ಗೇಟ್ ಅಳವಡಿಕೆ ತುರ್ತು ಅಗತ್ಯವಾಗಿದ್ದು, ಈ ವರ್ಷದ ಎರಡನೇ ಬೆಳೆಗೆ ನೀರು ಹರಿಸಲು ಆಗುವುದಿಲ್ಲ. ಇದಕ್ಕಾಗಿ ರೈತರು ಮತ್ತು ಆ ಭಾಗದ ಜನಪ್ರತಿನಿಧಿಗಳು ಸಹಕರಿಸಬೇಕು ಎಂದು ಡಿ.ಕೆ.ಶಿವಕುಮಾರ್‌ ಮನವಿ ಮಾಡಿದರು. ಟಿಬಿ ಡ್ಯಾಮ್‌ನ ಗೇಟ್‌ಗಳನ್ನು ಹೊಸದಾಗಿ ಅಳವಡಿಸಬೇಕಾದ ಕಾರಣಕ್ಕೆ ಈ ವರ್ಷ ಡ್ಯಾಮ್‌ ಪೂರ್ಣ ಪ್ರಮಾಣದ ನೀರು ಸಂಗ್ರಹಣೆ ಬದಲು 1,626 ಅಡಿಗಳಷ್ಟು ಮಾತ್ರ ನೀರು ಸಂಗ್ರಹಿಸಬೇಕು ಎಂದು ತಜ್ಞರು ಸಲಹೆ ಮಾಡಿದ್ದಾರೆ.

ಅಂದರೆ 80 ಟಿಎಂಸಿ ನೀರು ಮಾತ್ರ ಸಂಗ್ರಹಿಸುವಂತೆ ಹೇಳಿದ್ದಾರೆ. ಇದರಿಂದ ಸಹಜವಾಗಿಯೇ ಆ ಭಾಗದ ರೈತರಿಗೆ ಆತಂಕವಾಗಿದೆ. ಆದರೆ ಮುಂದಿನ 50 ವರ್ಷಗಳ ಕಾಲ ನಾವು ಅಣೆಕಟ್ಟೆಯನ್ನು ಸದ್ಬಳಕೆ ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ವಾಸ್ತವ ಪರಿಸ್ಥಿತಿಯನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ ಎಂದರು.

ಚಂದ್ರಬಾಬು ನಾಯ್ಡು ಭೇಟಿಗೆ ತೀರ್ಮಾನ: 132 ಟಿಎಂಸಿ ಸಾಮರ್ಥ್ಯದ ಟಿಬಿ ಡ್ಯಾಮ್‌ನಲ್ಲಿ 22ರಿಂದ 30 ಟಿಎಂಸಿಯಷ್ಟು ಹೂಳು ತುಂಬಿ ಕೊಂಡಿದೆ. ಇದಕ್ಕೆ ಸಮಾನಾಂತರ ಜಲಾಶಯ ನಿರ್ಮಾಣ ಆಗಬೇಕಿದೆ. ನವಿಲೆ ಜಲಾಶಯ ನಿರ್ಮಾಣಕ್ಕೆ 11 ಸಾವಿರ ಕೋಟಿ ರೂ. ಹಾಗೂ ಭೂಸ್ವಾಧೀನಕ್ಕೆ 3,978 ಕೋಟಿ ರೂ. ವೆಚ್ಚ ಆಗಲಿದೆ. ಬಿಜೆಪಿಯವರು ಕೂಡ ಜೊತೆ ಕೈಜೋಡಿಸಿದರೆ ಒಪ್ಪಿಸಬಹುದು ಎಂದು ಡಿಕೆಶಿ ಹೇಳಿದರು.

ಎರಡು ದಿನಗಳ ಹಿಂದೆ ಬಿಜೆಪಿ ಶಾಸಕ ಬಿ.ವೈ.ವಿಜಯೇಂದ್ರ ಸಹ ಈ ವಿಚಾರವನ್ನು ಸದನದಲ್ಲಿ ಪ್ರಸ್ತಾಪಿಸಿದ್ದರು. ವಿಜಯನಗರ, ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಯ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ ವಿಚಾರದಲ್ಲಿ ಈ ಭಾರಿ ಉತ್ತಮ ಮಳೆಯಾಗಿದ್ದರೂ ಸಹ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಬರುತ್ತಿದ್ದರೂ 6 ಕ್ರಸ್ಟ್ ಗೇಟ್ ಗಳಲ್ಲಿ ದೋಷ ಕಾಣುತ್ತಿದೆ ಎಂದು ಹೇಳಿದ್ದರು.

ಕಳೆದ ಆಗಸ್ಟ್ ನಲ್ಲೂ ಸಹ 19ನೇ ಟ್ರಸ್ಟ್ ಗೇಟ್ ಮುರಿದು ಹೋಗಿದ್ದ ಘಟನೆಯಿಂದ ಅಪಾರ ಪ್ರಮಾಣದಲ್ಲಿ ನೀರು ಪೋಲಾಗಿದೆ. ಪ್ರತಿ ವರ್ಷ ಈ ಭಾಗದ ರೈತರು ಎರಡು ಬೆಳೆಗಳನ್ನು ಬೆಳೆಯುತ್ತಿದ್ದರು, ಆದರೆ ಈ ವರ್ಷ ಆ ಅನಾಹುತದ ಕಾರಣದಿಂದ ಒಂದು ಬೆಳಗೇ ರೈತರು ತೃಪ್ತಿ ಪಟ್ಟುಕೊಳ್ಳುವಂತಹ ಸಂದರ್ಭ ಸೃಷ್ಟಿಯಾಗಿದೆ.

ಕ್ರಸ್ಟ್ ಗೇಟ್ ಗಳನ್ನು ತತಕ್ಷಣ ಅಳವಡಿಸದ ಕಾರಣದಿಂದ ಆ ಭಾಗದ ರೈತರು ಈಗಲೂ ಆತಂಕದ ಸ್ಥಿತಿಯಲ್ಲಿದ್ದಾರೆ. ಈ ಹಿಂದೆ ಬಿಜೆಪಿ ಸರ್ಕಾರವಿದ್ದಾಗ ನವಲಿ ಸಮಾನಾಂತರ ಜಲಾಶಯದ ಬಗ್ಗೆ ಪ್ರಸ್ತಾಪವಾಗಿತ್ತು, ರಾಜ್ಯ ಸರ್ಕಾರ ಈ ಕುರಿತು ಸೂಕ್ತ ಉತ್ತರ ನೀಡಲಿ ಎಂದು ಆಗ್ರಹಿಸಿದ್ದರು.

ಈ ವಿಚಾರದ ಕುರಿತು ಡಿ.ಕೆ.ಶಿವಕುಮಾರ್ ಸದನದಲ್ಲಿ ಮಾತನಾಡಿದ್ದರು

NO COMMENTS

LEAVE A REPLY

Please enter your comment!
Please enter your name here

Exit mobile version