Home ಸುದ್ದಿ ರಾಜ್ಯ ಜಾತಿ ಗಣತಿ ಜಟಾಪಟಿ: ಹಿಂದುಳಿದ ವರ್ಗಗಳ ಮಹತ್ವದ ಸಭೆ, ಸಿದ್ದರಾಮಯ್ಯಗೆ ಬೆಂಬಲ?

ಜಾತಿ ಗಣತಿ ಜಟಾಪಟಿ: ಹಿಂದುಳಿದ ವರ್ಗಗಳ ಮಹತ್ವದ ಸಭೆ, ಸಿದ್ದರಾಮಯ್ಯಗೆ ಬೆಂಬಲ?

0

ರಾಜ್ಯ ರಾಜಕಾರಣದಲ್ಲಿ ಜಾತಿ ಗಣತಿ ಸಮೀಕ್ಷೆಯ ಬಿಸಿ ದಿನದಿಂದ ದಿನಕ್ಕೆ ಏರುತ್ತಿದೆ. ಈ ಬಹುನಿರೀಕ್ಷಿತ ಸಮೀಕ್ಷೆ ಕುರಿತು ಬಿಜೆಪಿ, ಜೆಡಿಎಸ್ ಹಾಗೂ ಕಾಂಗ್ರೆಸ್‌ನೊಳಗಿನ ಕೆಲವು ಪ್ರಬಲ ಸಮುದಾಯದ ನಾಯಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ, ಕಾಂಗ್ರೆಸ್‌ನ ಹಿಂದುಳಿದ ವರ್ಗಗಳ ನಾಯಕರು ಮಹತ್ವದ ಹೆಜ್ಜೆಯಿಟ್ಟಿದ್ದಾರೆ.

ಜಾತಿ ಗಣತಿಗೆ ಸಂಪೂರ್ಣ ಬೆಂಬಲ ನೀಡಲು ಖಾಸಗಿ ಹೋಟೆಲ್‌ನಲ್ಲಿ ಸಭೆ ನಡೆಸಿ, ಸಿಎಂ ಸಿದ್ದರಾಮಯ್ಯ ಅವರ ಬೆನ್ನಿಗೆ ನಿಲ್ಲುವ ನಿರ್ಧಾರ ಮಾಡಿದ್ದಾರೆ. ಇದು ಗಣತಿ ವಿರೋಧಿಗಳಿಗೆ ಪ್ರಬಲ ಕೌಂಟರ್ ನೀಡಲು ಹೊರಟಿದ್ದು, ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದೆ.

ಗಣತಿಗೆ ತಡೆ ಬೇಡ: ಸಚಿವರಾದ ಸಂತೋಷ್ ಲಾಡ್, ಬೈರತಿ ಸುರೇಶ್ ಮಧು, ಬಂಗಾರಪ್ಪ, ಬೋಸರಾಜ್ ಸೇರಿದಂತೆ ಕಾಂಗ್ರೆಸ್‌ನ ಹಲವು ಹಿಂದುಳಿದ ವರ್ಗಗಳ ಸಚಿವರು, ಶಾಸಕರು, ಪರಿಷತ್ ಸದಸ್ಯರು ಹಾಗೂ ಸಂಸದರು ಈ ಸಭೆಯಲ್ಲಿ ಪಾಲ್ಗೊಂಡು. ಜಾತಿ ಗಣತಿ ಸಮೀಕ್ಷೆಗೆ ಯಾವುದೇ ಕಾರಣಕ್ಕೂ ತಡೆ ನೀಡಬಾರದು ಮತ್ತು ಅದನ್ನು ಯಶಸ್ವಿಗೊಳಿಸಬೇಕು ಎಂದು ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಲಿದ್ದರೆ.

ಈ ಮೂಲಕ ಮುಖ್ಯಮಂತ್ರಿಗಳಿಗೆ ಬೆಂಬಲದ ಸ್ಪಷ್ಟ ಸಂದೇಶ ರವಾನಿಸಲು ನಿರ್ಧರಿಸಲಾಗಿದೆ. ಜಾತಿಗಣತಿ ಪೂರ್ಣಗೊಳಿಸುವ ಮೂಲಕ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ದೊರಕಿಸಿಕೊಡುವ ಅಚಲ ನಿರ್ಧಾರವನ್ನು ನಾಯಕರು ವ್ಯಕ್ತಪಡಿಸುತಿದ್ದಾರೆ.

ಸಂಪುಟದಲ್ಲೂ ಚರ್ಚೆ, ಸಿದ್ದರಾಮಯ್ಯಗೆ ಮುಜುಗರ?: ಕಳೆದ ಸಂಪುಟ ಸಭೆಯಲ್ಲೂ ಜಾತಿ ಗಣತಿ ಕುರಿತು ಚರ್ಚೆ ನಡೆದಿತ್ತು. ಆಗ ಕೆಲವು ಪ್ರಬಲ ಸಮುದಾಯದ ಸಚಿವರು ವಿರೋಧ ವ್ಯಕ್ತಪಡಿಸಿದ್ದರಿಂದ, ಕಾಂಗ್ರೆಸ್‌ನೊಳಗೇ ವಿರೋಧವಿದೆ ಎಂಬುವುದು ಬಹಿರಂಗವಾಗಿ, ಸಿಎಂ ಸಿದ್ದರಾಮಯ್ಯ ಅವರಿಗೆ ಮುಜುಗರ ತಂದಿತ್ತು.

ಆದರೆ, ಈಗ ಹಿಂದುಳಿದ ವರ್ಗಗಳ ನಾಯಕರು ನೀಡುತ್ತಿರುವ ಈ ಬೃಹತ್ ಬೆಂಬಲ ಸಿಎಂಗೆ ದೊಡ್ಡ ರಾಜಕೀಯ ಬಲ ತುಂಬಲಿದೆ. ಇದು ಪ್ರಬಲ ಜಾತಿಗಳ ವಿರೋಧವನ್ನು ಸಮರ್ಥವಾಗಿ ಎದುರಿಸಲು ಸಹಾಯ ಮಾಡುತ್ತದೆ.

ಜಾತಿ ಗಣತಿಯು ಹಿಂದುಳಿದ ಸಮುದಾಯಗಳಿಗೆ ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹೆಚ್ಚಿನ ಅವಕಾಶಗಳನ್ನು ಒದಗಿಸಲು ನೆರವಾಗುತ್ತದೆ. ಈ ಸಮೀಕ್ಷೆಯ ಮೂಲಕ ಪ್ರತಿಯೊಂದು ಸಮುದಾಯದ ನೈಜ ಸ್ಥಿತಿಗತಿಗಳು (ಜನಸಂಖ್ಯೆ, ಆರ್ಥಿಕ, ಶೈಕ್ಷಣಿಕ ಹಿನ್ನಲೆ) ಹೊರಬಿದ್ದು, ಆರ್ಥಿಕ ಹಾಗೂ ಶೈಕ್ಷಣಿಕ ಸುಧಾರಣೆಗಳಿಗೆ ಪೂರಕವಾದ ಯೋಜನೆಗಳನ್ನು ರೂಪಿಸಲು ಸರ್ಕಾರಕ್ಕೆ ಸಹಾಯಕವಾಗಲಿದೆ.

ರಾಜ್ಯದಲ್ಲಿ ಮೀಸಲಾತಿ ಹಾಗೂ ಅಭಿವೃದ್ಧಿ ಯೋಜನೆಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಇದು ದತ್ತಾಂಶ ಆಧಾರಿತ ನಿರ್ಧಾರಗಳನ್ನು ಕೈಗೊಳ್ಳಲು ಅಡಿಪಾಯ ಹಾಕಲಿದೆ. ಸದ್ಯ ನ್ಯಾಯಾಲಯದಲ್ಲಿ ಗಣತಿಗೆ ತಡೆ ಕೋರಿ ಅರ್ಜಿ ವಿಚಾರಣೆ ನಡೆಯುತ್ತಿರುವ ಈ ಸಂದರ್ಭದಲ್ಲಿ, ಹಿಂದುಳಿದ ವರ್ಗಗಳ ಈ ಬೆಂಬಲ ತೀವ್ರ ಕುತೂಹಲ ಮೂಡಿಸಿದೆ. ಒಟ್ಟಾರೆ, ಜಾತಿ ಗಣತಿ ವಿಚಾರ ರಾಜ್ಯ ರಾಜಕಾರಣದಲ್ಲಿ ಹೊಸ ಸಂಚಲನ ಮೂಡಿಸಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version