Home ಸುದ್ದಿ ರಾಜ್ಯ 39 ನಿಗಮ – ಮಂಡಳಿಗಳಿಗೆ ಕೊನೆಗೂ ಅಧ್ಯಕ್ಷರ ನೇಮಕ

39 ನಿಗಮ – ಮಂಡಳಿಗಳಿಗೆ ಕೊನೆಗೂ ಅಧ್ಯಕ್ಷರ ನೇಮಕ

0

ಬೆಂಗಳೂರು: ಕಳೆದ ಏಳೆಂಟು ತಿಂಗಳಿನಿಂದ ಒಂದಿಲ್ಲೊಂದು ಕಾರಣಕ್ಕೆ ನೆನೆಗುದಿಗೆ ಬಿದ್ದಿದ್ದ ವಿವಿಧ ನಿಗಮ – ಮಂಡಳಿಗಳಿಗೆ ಕೊನೆಗೂ ಅಧ್ಯಕ್ಷರ ನೇಮಕ ವಾಗಿದೆ. ನೇಮಕಾತಿ ಆದೇಶ ಹೊರ ಬಿದ್ದಿರುವ 39ರ ಪೈಕಿ ಇಬ್ಬರು ಮಾಜಿ ಶಾಸಕರನ್ನು ಹೊರತು ಪಡಿಸಿದರೆ ಉಳಿದೆಲ್ಲವುಗಳಿಗೆ ಕಾಂಗ್ರೆಸ್ ಕಾರ್ಯಕರ್ತರನ್ನು ಅಧ್ಯಕ್ಷರನ್ನಾಗಿ ನೇಮಿಸಿರುವುದು ವಿಶೇಷವಾಗಿದೆ.
ಎಐಸಿಸಿ ಅಧ್ಯಕ್ಷರ ಅನುಮೋದನೆಯೊಂದಿಗೆ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ವಿವಿಧ 39 ನಿಗಮ-ಮಂಡಳಿ ಅಧ್ಯಕ್ಷರ ಪಟ್ಟಿಯನ್ನು ಬಿಡುಗಡೆಗೊಳಿಸಿದ್ದಾರೆ.

ನಿಗಮ-ಮಂಡಳಿ ನೂತನ ಅಧ್ಯಕ್ಷರ ಪಟ್ಟಿ

ಶಿವಲೀಲಾ ಕುಲಕರ್ಣಿ: ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ
ಪಿ. ರಘು: ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಆಯೋಗ
ಅರುಣ್ ಪಾಟೀಲ್: ವಾಯವ್ಯ ರಾಜ್ಯ ರಸ್ತೆ ಸಾರಿಗೆ ನಿಗಮ
ಜಗದೀಶ್ ವಡ್ನಾಳ್: ಜೈವಿಕ ವೈವಿಧ್ಯ ಮಂಡಳಿ
ಮುರಳಿ ಅಶೋಕ್: ಕರ್ನಾಟಕ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮ
ಡಾ. ಮೂರ್ತಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗ
ಕರ್ನಲ್ ಮಲ್ಲಿಕಾರ್ಜುನ್: ಮಾಜಿ ಸೈನಿಕರ ಕಲ್ಯಾಣ ಮಂಡಳಿ
ಡಾ.ಬಿ.ಸಿ. ಮುದ್ದುಗಂಗಾಧರ್: ಕರ್ನಾಟಕ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ
ಶರ್ಲೆಟ್ ಪಿಂಟೋ: ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ
ಮರಿಯೋಜಿ ರಾವ್: ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ
ಎಂ.ಎ.ಗಫೂರ್: ಕರಾವಳಿ ಅಭಿವೃದ್ಧಿ ಪ್ರಾಧಿಕಾರ
ಕೆ.ಹರೀಶ್ ಕುಮಾರ್: ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ನಿಯಮಿತ
ಎನ್. ಸಂಪಂಗಿ: ಕರ್ನಾಟಕ ಉಗ್ರಾಣ ನಿಗಮ
ವೈ.ಸಯೀದ್ ಅಹಮದ್: ದೇವರಾಜ್ ಅರಸ್ ಟ್ರಕ್ ಟರ್ಮಿನಲ್
ಮಹೇಶ್: ಕಾಡುಗೊಲ್ಲ ಅಭಿವೃದ್ಧಿ ನಿಗಮ
ಮಂಜಪ್ಪ: ಬಯಲುಸೀಮೆ ಅಭಿವೃದ್ಧಿ ಮಂಡಳಿ, ಚಿತ್ರದುರ್ಗ
ಧರ್ಮಣ್ಣ ಉಪ್ಪಾರ: ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮ
ಅಗಾ ಸುಲ್ತಾನ್ : ಕೇಂದ್ರೀಯ ಪರಿಹಾರ ಸಮಿತಿ
ಎಸ್.ಜಿ. ನಂಜಯ್ಯ ಮಠ: ಕರ್ನಾಟಕ ರಾಜ್ಯ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ನಿಗಮ
ಅಂಜನಪ್ಪ: ಕರ್ನಾಟಕ ಬೀಜ ಅಭಿವೃದ್ಧಿ ನಿಗಮ
ನೀಲಕಂಠ ಮುಲ್ಗೆ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ
ಬಾಬು ಹೊನ್ನ ನಾಯ್ಕ್ : ಭದ್ರಾ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ, ಭೀಮರಾಯನಗುಡಿ.ಕಲಬುರ್ಗಿ
ಯುವರಾಜ್ ಕದಮ್ : ಮಲಪ್ರಭಾ ಮತ್ತು ಅಚ್ಚುಕಟ್ಟು ಪ್ರಾಧಿಕಾರ, ಬೆಳಗಾವಿ.
ಜಮಾದಾರ್ ಅನಿಲ್ ಕುಮಾರ್ : ಕರ್ನಾಟಕ ತೊಗರಿಬೇಳೆ ಅಭಿವೃದ್ಧಿ ನಿಗಮ,ಕಲಬುರ್ಗಿ
ಪ್ರವೀಣ್ ಹರ್ವಾಲ್ : ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ.
ಮಂಜುನಾಥ್ ಪೂಜಾರಿ : ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ
ಸೈಯದ್ ಮೆಹಮೂದ್ ಚಿಸ್ತಿ : ಕಾಳುಗಳ ಅಭಿವೃದ್ಧಿ ಮಂಡಳಿ
ಮುತ್ತುರಾಜ್ : ಕರ್ನಾಟಕ ಸವಿತಾ ಸಮಾಜ ಅಭಿವೃದ್ಧಿ ನಿಗಮ
ನಂಜಪ್ಪ : ಕರ್ನಾಟಕ ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ
ವಿಶ್ವಾಸ ದಾಸ್ : ಕರ್ನಾಟಕ ಗಾಣಿಗ ಅಭಿವೃದ್ಧಿ ನಿಗಮ
ಆರ್. ಸತ್ಯನಾರಾಯಣ : ಕರ್ನಾಟಕ ರಾಜ್ಯ ಸಂಯಮ ಮಂಡಳಿ
ಗಂಗಾಧರ್ : ಕರ್ನಾಟಕ ರೇಷ್ಮೆ ಮಾರುಕಟ್ಟೆ ಮಂಡಳಿ
ಪಟೇಲ್ ಶಿವಪ್ಪ : ಹಾಸನ ನಗರಾಭಿವೃದ್ಧಿ ಪ್ರಾಧಿಕಾರ
ಬಿ.ಎಸ್. ಕವಲಗಿ : ಕರ್ನಾಟಕ ಲಿಂಬೆ ಅಭಿವೃದ್ಧಿ ಮಂಡಳಿ
ಶ್ರೀನಿವಾಸ ವೇಲು : ಕುಂಬಾರ ಅಭಿವೃದ್ಧಿ ನಿಗಮ
ಟಿ.ಎಂ. ಶಾಹೀದ್ ತಕ್ಕಿಲ್ : ಕರ್ನಾಟಕ ರಾಜ್ಯ ಕನಿಷ್ಟ ವೇತನ ಮಂಡಳಿ
ಚೇತನ್ ಕೆ. ಗೌಡ : ರಾಜ್ಯ ವಿದ್ಯುತ್ ಮೂಲಸೌಕರ್ಯ ಮಂಡಳಿ
ಶರಣಪ್ಪ ಸಾರದ್ಪುರ್ : ರಾಜ್ಯ ಕೃಷಿ ಉತ್ಪನ್ನ ಸಂಸ್ಕರಣೆ ಮಂಡಳಿ
ಲಾವಣ್ಯ ಬಲ್ಲಾಳ್ ಜೈನ್ : ಸಾವಯವ ಪ್ರಮಾಣೀಕರಣ ಏಜೆನ್ಸಿ

NO COMMENTS

LEAVE A REPLY

Please enter your comment!
Please enter your name here

Exit mobile version