Home ಸುದ್ದಿ ದೇಶ ದೇಶದ ನಂ.2 ಶ್ರೀಮಂತ ಸಚಿವ ಡಿಕೆಶಿ, ನಂ.5 ಬೈರತಿ ಸುರೇಶ್‌!

ದೇಶದ ನಂ.2 ಶ್ರೀಮಂತ ಸಚಿವ ಡಿಕೆಶಿ, ನಂ.5 ಬೈರತಿ ಸುರೇಶ್‌!

0

ದೇಶದ ಶ್ರೀಮಂತ ಶಾಸಕರು, ಸಚಿವರ ಪಟ್ಟಿ ಬಿಡುಗಡೆಯಾಗಿದೆ. ಕರ್ನಾಟಕದಲ್ಲಿ 8 ಶತಕೋಟ್ಯಧಿಪತಿ ಸಚಿವರು ಇದ್ದಾರೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವರದಿ ಹೇಳಿದೆ.

ಕರ್ನಾಟಕದಲ್ಲಿ0 8 ಶತಕೋಟ್ಯಧಿಪತಿ ಸಚಿವರು ಇದ್ದು, ಡಿಸಿಎಂ ಡಿ.ಕೆ.ಶಿವಕುಮಾರ್ ದೇಶದ 2ನೇ ಶ್ರೀಮಂತ ಮಂತ್ರಿ ಎಂದು ಚುನಾವಣಾ ಹಕ್ಕುಗಳ ಸಂಸ್ಥೆಯಾದ ಎಡಿಆರ್ ಬಿಡುಗಡೆ ಮಾಡಿರುವ ವರದಿಯಿಂದ ತಿಳಿದುಬಂದಿದೆ.

ದೇಶದ ಟಾಪ್ 10 ಮಂತ್ರಿಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಒಟ್ಟು ಆಸ್ತಿ 1,413 ಕೋಟಿ ರೂ. ಹಾಗೂ ಸಚಿವ ಬೈರತಿ ಸುರೇಶ್ 5ನೇ ಸ್ಥಾನದಲ್ಲಿದ್ದು ಒಟ್ಟು ಆಸ್ತಿ 648 ಕೋಟಿ ರೂಪಾಯಿ ಆಗಿದೆ.

ಆಂಧ್ರ ಪ್ರದೇಶದ ಟಿಡಿಪಿ ಸಂಸದ ಹಾಗೂ ಕೇಂದ್ರ ಸಚಿವ ಚಂದ್ರಶೇಖರ ಪೆಮ್ಮಸಾನಿ ಒಟ್ಟು ಆಸ್ತಿ 5,705 ಕೋಟಿ ರೂ.ಗಳು. ಅವರು ದೇಶದ ಶ್ರೀಮಂತ ಸಚಿವರು. 2ನೇ ಸ್ಥಾನದಲ್ಲಿ ಡಿ.ಕೆ.ಶಿವಕುಮಾರ್ ಇದ್ದಾರೆ.

3ನೇ ಸ್ಥಾನದಲ್ಲಿ ಆಂಧ್ರ ಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇದ್ದು ಒಟ್ಟು ಆಸ್ತಿ 971 ಕೋಟಿ ರೂ.ಗಳು. 4ನೇ ಸ್ಥಾನದಲ್ಲಿ ಆಂಧ್ರ ಪ್ರದೇಶದ ನೆಲ್ಲೂರು ಸಂಸದ ನಾರಾಯಣ ಪೊಂಗೂರು ಇದ್ದು, ಒಟ್ಟು ಆಸ್ತಿ 824 ಕೋಟಿ ರೂ.ಗಳು.

ಅರ್ಧಕ್ಕರ್ಧ ಸಚಿವರ ಮೇಲೆ ಕ್ರಿಮಿನಲ್ ಕೇಸ್: 27 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳು ಹಾಗೂ ಹಲವು ಕೇಂದ್ರ ಮಂತ್ರಿಗಳನ್ನು ಒಳಗೊಂಡು ಸ್ವಘೋಷಿತ ಅಫಿಡವಿಟ್ ಸಲ್ಲಿಸಿರುವ 643 ಸಚಿವರ ಪ್ರಮಾಣಪತ್ರವನ್ನು ಪರಿಶೀಲಿಸಲಾಗಿದೆ.

ಈ ವೇಳೆ 302 ಸಚಿವರ ವಿರುದ್ಧ ಕ್ರಿಮಿನಲ್‌ ಕೇಸ್‌ಗಳು ಇರುವುದು ಕಂಡುಬಂದಿದೆ. ಈ 302 ಸಚಿವರಲ್ಲಿ 174 ಸಚಿವರು ಗಂಭೀರ ಕ್ರಿಮಿನಲ್‌ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ ಎಂದೂ ವರದಿ ತಿಳಿಸಿದೆ.

ಅಪರಾಧ ಹಿನ್ನಲೆ ಹೊಂದಿರುವ ಸಚಿವರು. ಬಿಜೆಪಿ 136, ಕಾಂಗ್ರೆಸ್ 45, ಎಐಟಿಸಿ 13, ಡಿಎಂಕೆ 27, ಟಿಡಿಪಿ 22, ಎಎಪಿ 11, ಜೆಡಿಯು 4, ಶಿವಸೇನೆ 7.

NO COMMENTS

LEAVE A REPLY

Please enter your comment!
Please enter your name here

Exit mobile version