Home ಸುದ್ದಿ ದೇಶ ಪಿಎಂ ಮೋದಿ ದೂರದೃಷ್ಟಿ: ನವ ಭಾರತದ ಉದಯ

ಪಿಎಂ ಮೋದಿ ದೂರದೃಷ್ಟಿ: ನವ ಭಾರತದ ಉದಯ

0

ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಭಾರತ ಗಮನಾರ್ಹವಾದ ‘ನವ ಭಾರತ’ವಾಗುತ್ತಿದೆ. ಡಿಜಿಟಲ್ ಇನ್ನೋವೇಶನ್, ಸ್ವಾವಲಂಬನೆ, ಸುಸ್ಥಿರ ಬೆಳವಣಿಗೆ ಮತ್ತು ದೂರದೃಷ್ಟಿಯ ಆಡಳಿತದ ಮೂಲಕ ಪ್ರಧಾನಿ ನರೇಂದ್ರ ಮೋದಿ ಹೊಸ ಶಕೆಗೆ ಶಂಕು ಸ್ಥಾಪನೆಯನ್ನು ಮಾಡಿದ್ದಾರೆ.

ಡಿಜಿಟಲ್ ಸುಧಾರಣೆಗಳು, ವಿಶ್ವ ನಾಯಕತ್ವದ ಮುಂದಾಳತ್ವ, ಸುಸ್ಥಿರ ಬೆಳವಣಿಗೆಯ ಗುರಿ ಮತ್ತು ಗಟ್ಟಿತನದ ತೀರ್ಮಾನಗಳು ಭಾರತವನ್ನು ಆಧುನಿಕ, ಆತ್ಮನಿರ್ಭರ ಮತ್ತು ವಿಶ್ವದಲ್ಲೇ ಪ್ರಭಾವಶಾಲಿಯನ್ನಾಗಿ ಮಾಡಿದೆ. ಹಲವು ಉಪ ಕ್ರಮಗಳು ನವ ಭಾರತಕ್ಕೆ ಶಂಕು ಸ್ಥಾಪನೆ ಮಾಡುವ ಮೂಲಕ ಭಾರತವನ್ನು ಭವಿಷ್ಯಕ್ಕೆ ತಯಾರಿ ಮಾಡುತ್ತಿದೆ.

* ಡಿಜಿಟಲ್ ಇಂಡಿಯಾ: 2015ರಲ್ಲಿ ಯುಪಿಎ ಮೂಲಕ ಹಣಕಾಸು ವಹಿವಾಟಿನಲ್ಲಿ ಕ್ರಾಂತಿಕಾರಿ ಬದಲಾವಣೆ ತರಲಾಯಿತು. ಅಲ್ಲದೇ ಡಿಜಿಲಾಕರ್, ಡಿಜಿಯಾತ್ರಾ ಮೂಲಕ ಬಡತನ ಮತ್ತು ಕೋವಿಡ್ 19 ವಿರುದ್ಧದ ಹೋರಾಟದಲ್ಲಿ ಭಾರತವನ್ನು ಶಕ್ತಿಯುತಗೊಳಿಸಲಾಯಿತು.

* ಆಧಾರ್ ಏಕೀರಣ: ಆಧಾರ್‌ಗೆ 140 ಕೋಟಿ ನೋಂದಣಿ ಮಾಡುವ ಮೂಲಕ ಸುರಕ್ಷಿತ ಡಿಜಿಟಲ್ ಗುರುತನ್ನು ನೀಡಲಾಯಿತು. ಇದು ವಿಶ್ವದ ಅತ್ಯಂತ ದೊಡ್ಡ ಬಯೋಮೆಟ್ರಿಕ್ ವ್ಯವಸ್ಥೆಗೆ ನಾಂದಿಯಾಯಿತು.

* ವಿಶ್ವದ ನಾಯಕತ್ವ: ವಿಶ್ವದ ವೇದಿಕೆಯಲ್ಲಿ ಭಾರತದ ಒಬ್ಬ ಪ್ರಭಾವಿ ನಾಯಕರ ಸ್ಥಾನವನ್ನು ನರೇಂದ್ರ ಮೋದಿ ಈಗ ಅಲಂಕರಿಸಿದ್ದಾರೆ. 27 ದೇಶಗಳ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ಪಡೆದಿದ್ದಾರೆ. ರಾಜತಾಂತ್ರಿಕತೆ ಮೂಲಕ ವಿಶ್ವದಲ್ಲಿ ಭಾರತದ ಚಿತ್ರಣವನ್ನು ಬದಲಾಣೆ ಮಾಡಿದ್ದಾರೆ.

ಸುಸ್ಥಿರ ಬೆಳವಣಿಗೆ ಮೂಲಕ ಆತ್ಮನಿರ್ಭರ ಭಾರತ

  • ರಕ್ಷಣಾ ಕ್ಷೇತ್ರದ ಸ್ವಾವಲಂಬನೆ ಮತ್ತು ಆಪರೇಷನ್ ಸಿಂಧೂರ್: ಆಪರೇಷನ್ ಸಿಂಧೂರ್ ಮೂಲಕ ಪ್ರಧಾನಿ ನರೇಂದ್ರ ಮೋದಿ ರಕ್ಷಣಾ ಕ್ಷೇತ್ರದಲ್ಲಿ ಭಾರತದ ಸ್ವಾವಲಂಬನೆಯನ್ನು ತೋರಿಸಿದ್ದಾರೆ. ಈ ಕಾರ್ಯಾಚರಣೆ ದೇಶಿಯ ನಿರ್ಮಿತ ಶಸ್ತ್ರಾಸ್ತ್ರಗಳ ಮೂಲಕ ಭಾರತದ ಸ್ಥಳೀಯ ಸಾಮರ್ಥ್ಯಗಳನ್ನು ತೋರಿಸಿದೆ ಮತ್ತು ನಿರ್ಣಾಯಕವಾಗಿ ಮತ್ತು ಸ್ವತಂತ್ರವಾಗಿ, ರಾಷ್ಟ್ರೀಯ ಭದ್ರತೆಗಾಗಿ ವಿದೇಶವನ್ನು ಅವಲಂಬಿಸಲು ಸಾಧ್ಯವಿಲ್ಲ ಎಂದು ಸಾಬೀತುಪಡಿಸಿದೆ.
  • ಸುಸ್ಥಿರ ಬೆಳವಣಿಗೆ: ಭಾರತದ ಸಾಂಪ್ರದಾಯಿಕವಲ್ಲದ ಇಂಧನ ಉತ್ಪಾದನೆ ಗಮನಾರ್ಹ ಮಾದರಿಯಲ್ಲಿ ಏರಿಕೆಕಂಡಿದೆ. ಇದು 2014 ರಿಂದ 81 ಜಿಗಾವಾಟ್‌ನಿಂದ 251 ಜಿಗಾವಾಟ್‌ಗೆ ತಲುಪಿದೆ. ಇದರಲ್ಲಿ ಸೌರಶಕ್ತಿ, ಪವನ ವಿದ್ಯುತ್, ಹೈಡ್ರೋ, ಜೈವಿಕ ಶಕ್ತಿ ಮತ್ತು ಪರಮಾಣು ವಿದ್ಯುತ್ ಸೇರಿವೆ. ಭಾರತ ಶುದ್ಧ ಇಂಧನಕ್ಕೆ ಬದ್ಧವಾಗಿದೆ, ಈ ವಲಯದಲ್ಲಿ ಜಾಗತಿಕ ನಾಯಕನಾಗುತ್ತಿದೆ.
  • ಅಂತರಾಷ್ಟ್ರೀಯ ಸೌರ ಒಪ್ಪಂದ: 2015ರಲ್ಲಿ ಪಿಎಂ ನರೇಂದ್ರ ಮೋದಿ ಅಂತರರಾಷ್ಟ್ರೀಯ ಸೌರ ಒಕ್ಕೂಟ (ಐಎಸ್‌ಎ) ಸಹ ಸಂಸ್ಥಾಪನೆ ಮಾಡಿದೆ. ಇದು ಭಾರತದ ನೇತೃತ್ವದ ಮೊದಲ ಅಂತರರಾಷ್ಟ್ರೀಯ ಒಪ್ಪಂದ ಆಧಾರಿತ ಒಕ್ಕೂಟವಾಗಿದೆ. ಸೌರಶಕ್ತಿ ಅಳವಡಿಕೆಯನ್ನು ಉತ್ತೇಜಿಸಲು 100ಕ್ಕೂ ಹೆಚ್ಚು ದೇಶಗಳನ್ನು ಒಟ್ಟುಗೂಡಿಸುವುದು, ಸುಸ್ಥಿರ ಅಭಿವೃದ್ಧಿಯಲ್ಲಿ ಭಾರತದ ನಿಲುವನ್ನು ಪ್ರದರ್ಶಿಸುತ್ತದೆ.

ಅಭಿವೃದ್ಧಿಯೊಂದಿಗೆ ನಾವೀನ್ಯತೆಯನ್ನು ಸಂಯೋಜಿಸುವ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಭವಿಷ್ಯದ ಭಾರತದತ್ತ ಹೆಜ್ಜೆ ಹಾಕುತ್ತಿದ್ದಾರೆ. ಅವರ ಆಡಳಿತದ ಮಾದರಿ, ಡಿಜಿಟಲ್ ಎಂಪರ್‌ಮೆಂಟ್, ಸುಸ್ಥಿರ ಅಭಿವೃದ್ಧಿ, ಸಮರ್ಥನೀಯ ನಡೆಗಳು ಭವಿಷ್ಯದಲ್ಲಿಯೂ ಪರಿವರ್ತನೆಯನ್ನು ತರಲಿವೆ, ಇದು ದೇಶವನ್ನು ಆಧುನಿಕ, ಖಚಿತವಾದ ಆತ್ಮನಿರ್ಭರ ಭಾರತ ಮಾಡುವ ಮೂಲಕ ವಿಶ್ವದ ವೇದಿಕೆಯಲ್ಲಿ ಗಟ್ಟಿಯಾಗಿ ನಿಲ್ಲುವಂತೆ ಮಾಡಲಿದೆ.

NO COMMENTS

LEAVE A REPLY

Please enter your comment!
Please enter your name here

Exit mobile version