Home ಸುದ್ದಿ ದೇಶ Bihar Assembly Election 2025: ಬಿಹಾರ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಘೋಷಣೆ

Bihar Assembly Election 2025: ಬಿಹಾರ ವಿಧಾನಸಭೆ ಚುನಾವಣೆ ವೇಳಾಪಟ್ಟಿ ಘೋಷಣೆ

0

Bihar Assembly Election 2025. ದೇಶಾದ್ಯಂತ ಕುತೂಹಲ ಕೆರಳಿಸಿರುವ ಮತ್ತು ಕಾಂಗ್ರೆಸ್‌ನ ಮತಕಳವು ಆರೋಪ ಕೇಳಿ ಬಂದ ಬಳಿಕ ನಡೆಯುತ್ತಿರುವ ಮೊದಲ ವಿಧಾನಸಭೆ ಚುನಾವಣೆಯ ದಿನಾಂಕ ಘೋಷಣೆಯಾಗಿದೆ. ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಕಾಂಗ್ರೆಸ್ ನೇತೃತ್ವದ ಆರ್‌ಜೆಡಿ ಬಿಹಾರ ಚುನಾವಣೆಯಲ್ಲಿ ಪ್ರತಿಸ್ಪರ್ಧಿಗಳು.

ದೆಹಲಿಯಲ್ಲಿ ಸೋಮವಾರ ಪತ್ರಿಕಾಗೋಷ್ಠಿ ನಡೆಸಿದ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಬಿಹಾರ ವಿಧಾನಸಭೆ ಚುನಾವಣೆ-2025ರ ದಿನಾಂಕ ಘೋಷಣೆ ಮಾಡಿದರು. ರಾಜ್ಯದ 243 ವಿಧಾನಸಭಾ ಕ್ಷೇತ್ರಗಳಿಗೆ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ಚುನಾವಣಾ ಫಲಿತಾಂಶ ನವೆಂಬರ್ 14ರಂದು ಪ್ರಕಟವಾಗಲಿದೆ.

ಬಿಹಾರದಲ್ಲಿ ನವೆಂಬರ್ 6 ಮತ್ತು ನವೆಂಬರ್ 11ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ. ನವೆಂಬರ್ 14 ರ ಶುಕ್ರವಾರ ಮತ ಎಣಿಕೆ ನಡೆಯಲಿದ್ದು, ಫಲಿತಾಂಶವೂ ಪ್ರಕಟವಾಗಲಿದೆ. 2025ರಲ್ಲಿ ನಡೆಯುತ್ತಿರುವ ಕೊನೆಯ ವಿಧಾನಸಭೆ ಚುನಾವಣೆ ಇದಾಗಿದೆ. ಹಾಲಿ ಬಿಹಾರ ರಾಜ್ಯದ ಆಡಳಿತ ಪಕ್ಷ ಎನ್‌ಡಿಎ ಮೈತ್ರಿಕೂಟ, ಮುಖ್ಯಮಂತ್ರಿ ನಿತೀಶ್ ಕುಮಾರ್.

ಚುನಾವಣಾ ಅಂಕಿ ಸಂಖ್ಯೆಗಳು: ಬಿಹಾರ ವಿಧಾನಸಭಾ ಚುನಾವಣೆಯ ಒಟ್ಟು ಮತದಾರರು 7.43 ಕೋಟಿ. ಇವರಲ್ಲಿ 3.92 ಕೋಟಿ ಪುರುಷರು, 3.50 ಕೋಟಿ ಮಹಿಳೆಯರು ಮತ್ತು 1725 ತೃತೀಯ ಲಿಂಗಿಗಳು. ವಿಶೇಷ ಚೇತನರು 7.2 ಲಕ್ಷ, 4.04 ಲಕ್ಷ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, 14 ಸಾವಿರ ಶತಾಯುಷಿಗಳು ಮತ್ತು 1.63 ಲಕ್ಷ ಸೇವಾ ಮತದಾರರನ್ನು ಗುರುತಿಸಲಾಗಿದೆ. ಯುವ ಮತದಾರರು 18-19 ವರ್ಷದ 14.01 ಲಕ್ಷ ಹೊಸ ಮತದಾರರನ್ನು ಸೇರಿಸಲಾಗಿದೆ.

ಒಟ್ಟು 243 ವಿಧಾನಸಭಾ ಕ್ಷೇತ್ರಗಳು. 121 ಕ್ಷೇತ್ರಗಳಲ್ಲಿ ಮೊದಲ ಹಂತದಲ್ಲಿ ನವೆಂಬರ್ 6ರಂದು ಮತದಾನ, 122 ಕ್ಷೇತ್ರಗಳಲ್ಲಿ ಎರಡನೇ ಹಂತದಲ್ಲಿ ಮತದಾನ ನಡೆಯಲಿದೆ.

ಮೊದಲ ಹಂತ ಚುನಾವಣೆ:

  • ಅಧಿಸೂಚನೆ ಹೊರಡಿಸುವ ದಿನಾಂಕ: 10 ಅಕ್ಟೋಬರ್‌ 2025
  • ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ: 17 ಅಕ್ಟೋಬರ್‌ 2025
  • ನಾಮಪತ್ರಗಳ ಪರಿಶೀಲನೆಯ ದಿನಾಂಕ: 18 ಅಕ್ಟೋಬರ್‌ 2025
  • ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ: 20ಅಕ್ಟೋಬರ್‌ 2025
  • ಮತದಾನದ ದಿನಾಂಕ: ನ. 06.2025

ಎರಡನೇ ಹಂತ ಚುನಾವಣೆ:

  • ಅಧಿಸೂಚನೆ ಹೊರಡಿಸುವ ದಿನಾಂಕ: 13 ಅಕ್ಟೋಬರ್‌ 2025
  • ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ: 20 ಅಕ್ಟೋಬರ್‌ 2025
  • ನಾಮಪತ್ರಗಳ ಪರಿಶೀಲನೆಯ ದಿನಾಂಕ: 21 ಅಕ್ಟೋಬರ್‌ 2025
  • ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ: 23 ಅಕ್ಟೋಬರ್‌ 2025
  • ಮತದಾನದ ದಿನಾಂಕ: 11 ನವೆಂಬರ್ 2025
  • ಮತಗಳ ಎಣಿಕೆಯ ದಿನಾಂಕ: 14 ನವೆಂಬರ್ 2025
  • ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವ ದಿನಾಂಕ: 16 ನವೆಂಬರ್ 2025

NO COMMENTS

LEAVE A REPLY

Please enter your comment!
Please enter your name here

Exit mobile version