Home ತಾಜಾ ಸುದ್ದಿ DCET-25 ದಾಖಲೆ ಪರಿಶೀಲನೆಗೆ ಹೆಚ್ಚುವರಿ ಅವಕಾಶ

DCET-25 ದಾಖಲೆ ಪರಿಶೀಲನೆಗೆ ಹೆಚ್ಚುವರಿ ಅವಕಾಶ

0

ಬೆಂಗಳೂರು: ಡಿಸಿಇಟಿ ದಾಖಲೆ ಪರಿಶೀಲನೆಗಾಗಿ ಇನ್ನೂ ಎರಡು ದಿನಗಳ ಕಾಲ ಹೆಚ್ಚುವರಿ ಅವಕಾಶ ನೀಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು DCET-25 ದಾಖಲೆ ಪರಿಶೀಲನೆಯನ್ನು ಮತ್ತೂ ಎರಡು ದಿನ ವಿಸ್ತರಿಸಲಾಗಿದ್ದು, ಜೂ.14 ಮತ್ತು 16ರಂದು ನಿಗದಿತ ಕಾಲೇಜುಗಳಲ್ಲಿ ದಾಖಲೆ ಪರಿಶೀಲನೆ ನಡೆಯಲಿದೆ ಎಂದು #KEA ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ವಿದ್ಯಾರ್ಥಿಗಳ ಮನವಿ ಮೇರೆಗೆ ಶುಕ್ರವಾರ (ಜೂ 13) ಕೊನೆ ಆಗಬೇಕಾಗಿದ್ದ ದಾಖಲೆ ಪರಿಶೀಲನೆಯನ್ನು ಎರಡು ದಿನ ವಿಸ್ತರಿಸಲಾಗಿದೆ. ವಿದ್ಯಾರ್ಥಿಗಳು ಇದರ ಉಪಯೋಗ ಪಡೆಯಬಹುದು. ಮೂಲ ದಾಖಲೆಗಳ ಸಮೇತ ವಿದ್ಯಾರ್ಥಿಗಳು ಕಾಲೇಜುಗಳಿಗೆ ತೆರಳಬೇಕು ಎಂದು ಅವರು ಕೋರಿದ್ದಾರೆ.

Exit mobile version