Home ಕ್ರೀಡೆ 38ನೇ ನ್ಯಾಷನಲ್​ ಗೇಮ್ಸ್​: ದೀನಿಧಿಯ ಸಾಧನೆ ಕರ್ನಾಟಕಕ್ಕೆ ಹೆಮ್ಮೆ

38ನೇ ನ್ಯಾಷನಲ್​ ಗೇಮ್ಸ್​: ದೀನಿಧಿಯ ಸಾಧನೆ ಕರ್ನಾಟಕಕ್ಕೆ ಹೆಮ್ಮೆ

0

3 ಚಿನ್ನದ ಪದಕಗಳನ್ನು ಗೆದ್ದು ಹೊಸ ರಾಷ್ಟ್ರೀಯ ದಾಖಲೆ

ಉತ್ತರಾಖಂಡದಲ್ಲಿ ನಡೆಯುತ್ತಿರುವ 38ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕ ಪರವಾಗಿ ಭರ್ಜರಿ ಪ್ರದರ್ಶನ ನೀಡಿದ ದೀನಿಧಿ ದೇಸಿಂಗು ಅವರಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅಭಿನಂದನೆ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ರಾಷ್ಟ್ರೀಯ ಕ್ರೀಡಾಕೂಟ 2025 ರ ಮಹಿಳಾ ವಿಭಾಗ 200 ಮೀಟರ್ ಫ್ರೀಸ್ಟೈಲ್ ಸ್ವಿಮ್ಮಿಂಗ್, 100 ಮೀಟರ್ ಬಟರ್ ಫ್ಲೈ ಹಾಗೂ 4×100 ಮೀಟರ್ ಫ್ರೀಸ್ಟೈಲ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕರ್ನಾಟಕದ ದೀನಿಧಿ ದೇಸಿಂಗು ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. 3 ಚಿನ್ನದ ಪದಕಗಳನ್ನು ಗೆದ್ದು ಹೊಸ ರಾಷ್ಟ್ರೀಯ ದಾಖಲೆಯನ್ನು ಸೃಷ್ಟಿಸುವ ಮೂಲಕ ಅವರ ಅಸಾಧಾರಣ ಪ್ರತಿಭೆ ಮತ್ತು ದೃಢತೆಯನ್ನು ಪ್ರದರ್ಶಿಸಿದ್ದಾರೆ. ದೀನಿಧಿಯ ಸಾಧನೆಗಳು ಕರ್ನಾಟಕ ಮತ್ತು ಇಡೀ ರಾಷ್ಟ್ರಕ್ಕೆ ಹೆಮ್ಮೆ ತಂದಿದೆ! ಅವರ ಮುಂದಿನ ಪಯಣ ಯಶಸ್ವಿಯಾಗಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.

Exit mobile version