Home ತಾಜಾ ಸುದ್ದಿ 3000 ಗರ್ಭಿಣಿಯರಿಗೆ ಸೀಮಂತದ ಸಡಗರ

3000 ಗರ್ಭಿಣಿಯರಿಗೆ ಸೀಮಂತದ ಸಡಗರ

0

ಬೆಳಗಾವಿ: ಇದೊಂದು ಅಪರೂಪದಲ್ಲಿ ಅಪರೂಪದ ಸಮಾರಂಭ… ಸಂಭ್ರಮ…. ಸಾಮೂಹಿಕ ವಿವಾಹದಂತೆ ಇಲ್ಲಿ ಮೊಟ್ಟಮೊದಲ ಬಾರಿ ಎಂಬಂತೆ ಸಾಮೂಹಿಕ ಸೀಮಂತ ಕಾರ್ಯಕ್ರಮ, ಮೂರು ಸಾವಿರ ಗರ್ಭಿಣಿಯರು ಸಾಕ್ಷಿ…
ಕುಂದಾನಗರಿಯ ಸಿ.ಪಿ.ಎಡ್ ಆಟದ ಮೈದಾನದಲ್ಲಿ ಸೋಮವಾರ ಬೆಳಗ್ಗೆ ೧೦.೩೦ರಿಂದ ಬಲು ಸಡಗರದ ಈ ಸಮಾರಂಭ ನಡೆಯಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಪ್ರಯುಕ್ತ ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಯ ಕಾರ್ಯಕ್ರಮವಿದು. 3000 ಗರ್ಭಿಣಿಯರಿಗೆ ಸೀರೆ, ಹೂವು, ಹಣ್ಣು ಕಾಯಿ, ಅರಿಶಿನ-ಕುಂಕುಮ, ಬಳೆ ಹೀಗೆ ಪಂಚ ಬಗೆಯ ಮಂಗಳಕರ ಸಾಮಗ್ರಿಗಳನ್ನೊಳಗೊಂಡು ಉಡಿ ತುಂಬುವ ಶಾಸ್ತ್ರದೊಂದಿಗೆ ಸೀಮಂತ ನೆರವೇರಿಸಲಾಗುವುದು. ಮುಂಬರುವ ದಿನಗಳಲ್ಲಿ ಇದನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು. ಸಚಿವ ಸತೀಶ್ ಜಾರಕಿಹೊಳಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದರು.

Exit mobile version