Home ನಮ್ಮ ಜಿಲ್ಲೆ ಚಿಕ್ಕಮಗಳೂರು 14 ದಿನಗಳವರೆಗೆ ಚಿಕ್ಕಮಗಳೂರು ಜಿಲ್ಲೆಗೆ ಪ್ರವೇಶಿಸದಂತೆ ಮುತಾಲಿಕ್‌ಗೆ ನಿರ್ಬಂಧ

14 ದಿನಗಳವರೆಗೆ ಚಿಕ್ಕಮಗಳೂರು ಜಿಲ್ಲೆಗೆ ಪ್ರವೇಶಿಸದಂತೆ ಮುತಾಲಿಕ್‌ಗೆ ನಿರ್ಬಂಧ

0

ಚಿಕ್ಕಮಗಳೂರು: ಶ್ರೀರಾಮಸೇನೆಯ ಪ್ರಮೋದ್ ಮುತಾಲಿಕ್‌ಗೆ 14 ದಿನಗಳ ಕಾಲ ಜಿಲ್ಲೆಗೆ ಪ್ರವೇಶಿಸದಂತೆ ನಿರ್ಬಂಧ ಹೇರಲಾಗಿದೆ.
ದತ್ತಪೀಠದ ಸಮೀಪ ನಾಗೇನಹಳ್ಳಿ ದರ್ಗಾದಲ್ಲಿ ಡಿ. 26ರಂದು ದತ್ತಜಯಂತಿ ಆಚರಣೆ ಮಾಡುತ್ತೇವೆ ಎಂದು ಶ್ರೀರಾಮ ಸೇನೆ ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ಹೇಳಿದ್ದರು.
ಜಿಲ್ಲೆಯು ಕೋಮು ಹಾಗೂ ಮತೀಯ ಸೂಕ್ಷ್ಮ ಜಿಲ್ಲೆಯಾಗಿರುವುದರಿಂದ ಪ್ರಮೋದ್ ಮುತಾಲಿಕ್ ಮತ್ತು ಗಂಗಾಧರ ಮಹಾದೇವ್ ರಾವ್ ಕುಲಕರ್ಣಿ ಇವರುಗಳು ದತ್ತ ಜಯಂತಿ ಕಾರ್ಯಕ್ರಮಕ್ಕೆ ಆಗಮಿಸಿದಲ್ಲಿ ಪ್ರಚೋದನಾಕಾರಿ ಭಾಷಣಗಳನ್ನು ಮಾಡುವ ಸಾಧ್ಯತೆಗಳಿದ್ದು, ಡಿ. 23ರಿಂದ ಜ. 5ರ ಮಧ್ಯರಾತ್ರಿ ಯವರೆಗೆ ಚಿಕ್ಕಮಗಳೂರು ಜಿಲ್ಲೆಗೆ ಪ್ರವೇಶಿಸದಂತೆ ನಿರ್ಭಂದಿಸಿ ಜಿಲ್ಲಾಡಳಿತದಿಂದ ಆದೇಶ ಹೊರಡಿಸಿದ್ದಾರೆ.

Exit mobile version