Home News ಹುಬ್ಬಳ್ಳಿ ರೈಲ್ವೆ ವಿಭಾಗದಿಂದ `ಎಟಿವಿಎಂ’ ಗಳ ಕಾರ್ಯಾಚರಣೆ: ಟಿಕೆಟ್ ಖರೀದಿ ದಟ್ಟಣೆಗೆ ಪರಿಹಾರ

ಹುಬ್ಬಳ್ಳಿ ರೈಲ್ವೆ ವಿಭಾಗದಿಂದ `ಎಟಿವಿಎಂ’ ಗಳ ಕಾರ್ಯಾಚರಣೆ: ಟಿಕೆಟ್ ಖರೀದಿ ದಟ್ಟಣೆಗೆ ಪರಿಹಾರ

ಹುಬ್ಬಳ್ಳಿ : ಟಿಕೆಟ್ ಕೌಂಟರ್‌ಗಳಲ್ಲಿನ ಜನದಟ್ಟಣೆ ಕಡಿಮೆ ಮಾಡುವ ಉದ್ದೇಶದಿಂದ ನೈಋತ್ಯ ರೈಲ್ವೆ (ಎಸ್‌ಡಬ್ಲುö್ಯಆರ್) ಹುಬ್ಬಳ್ಳಿ ವಿಭಾಗವು ತನ್ನ ವಿಭಾಗದ ವ್ಯಾಪ್ತಿಯಲ್ಲಿನ ರೈಲು ನಿಲ್ದಾಣಗಳಲ್ಲಿ ಸ್ವಯಂಚಾಲಿತ ಟಿಕೆಟ್ ವಿತರಣಾ ಯಂತ್ರಗಳನ್ನು ಆಟೋಮ್ಯಾಟಿಕ್ ಟಿಕೆಟ್ ವೆಂಡಿAಗ್ ಮಶಿನ್ ( ಎಟಿವಿಎಂ) ಅಳವಡಿಸಿದೆ.
ಭಾರತೀಯ ರೈಲ್ವೆಯ ಡಿಜಿಟಲ್ ಟಿಕೆಟ್ ವ್ಯವಸ್ಥೆಯ ಪ್ರೋತ್ಸಾಹದ ಭಾಗವಾಗಿ ಂಖಿಗಿಒ ಅಳವಡಿಸಲಾಗಿದ್ದು, ಪ್ರಸ್ತುತ ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ೮, ಬೆಳಗಾವಿ , ಬಳ್ಳಾರಿಯಲ್ಲಿ ತಲಾ ೦೩, ಬಾಗಲಕೋಟೆ, ವಿಜಯಪುರ, ಗದಗ ಮತ್ತು ಹೊಸಪೇಟೆಯಲ್ಲಿ ತಲಾ ೦೨, ಧಾರವಾಡ, ಕೊಪ್ಪಳ ಮತ್ತು ಘಟಪ್ರಭಾದಲ್ಲಿ ತಲಾ ೧ ರಂತೆ ಒಟ್ಟು ೨೫ ಂಖಿಗಿಒ ಕಾರ್ಯ ನಿರ್ವಹಿಸುತ್ತಿವೆ .
ಪ್ರಯಾಣಿಕರಲ್ಲಿ ಬಹುಪಾಲು ಮಂದಿ ಕಾಯ್ದಿರಿಸಲಾಗದ ಟಿಕೆಟ್‌ಗಳ ಮೇಲೆ ಹೆಚ್ಚು ಅವಲಂಭಿತರಾಗಿದ್ದಾರೆ. ಕೆಲವೊಮ್ಮೆ ಕಾರ್ಮಿಕರು, ವಿದ್ಯಾರ್ಥಿಗಳು ಹಾಗೂ ದೈನಂದಿನ ಪ್ರಯಾಣಿಕರು ಸಾಲಿನಲ್ಲಿ ನಿಲ್ಲದೆ, ಈ ಯಂತ್ರದಿAದ ಸುಲಭವಾಗಿ ಮತ್ತು ತ್ವರಿತವಾಗಿ ಟಿಕೆಟ್ ಪಡೆಯಲು ಸಹಕಾರಿಯಾಗಿದೆ. ಒಟ್ಟು ೩೧ ಂಖಿಗಿಒ ಸಹಾಯಕರನ್ನು (ಜಿಚಿಛಿiಟiಣಚಿಣoಡಿs) ವಿಭಿನ್ನ ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ಯಂತ್ರಗಳನ್ನು ಬಳಸುವಲ್ಲಿ ನೆರವಾಗುವಂತೆ ನೇಮಕ ಮಾಡಲಾಗಿದೆ. ಇವರು ತಮಗೆ ನೀಡಲಾದ ಫೆಸಿಲಿಟೇಟರ್ ಸ್ಮಾರ್ಟ್ ಕಾರ್ಡ್ ಮೂಲಕ ಟಿಕೆಟ್ ನೀಡುವವರು ಈ ಸಹಾಯಕರು (ಜಿಚಿಛಿiಟiಣಚಿಣoಡಿs) ನಿವೃತ ರೈಲ್ವೆ ನೌಕರರಾಗಿದ್ದು, ಅಧಿಕಾರಿಗಳಿಂದ ನೇಮಕಗೊಂಡ ಸಮಿತಿಯಿಂದ ಆಯ್ಕೆಯಾಗಿತ್ತಾರೆ.
ಈ ಯಂತ್ರದಿAದ ಮಾಸಿಕ (ಸೀಸನ್ ) ಟಿಕೆಟ್ , ಪ್ಲಾಟಫಾರ್ಮ್ , ಕಾಯ್ದಿರಿಸದ (uಟಿಡಿeseಡಿveಜ ) ಟಿಕೆಟ್ ಪಡೆಯಬಹುದಾಗಿದೆ. ವಿಶೇಷವಾಗಿ ಸ್ಮಾರ್ಟ್ ಕಾರ್ಡ್ ರೀತಿ ರಿಚಾರ್ಜ್ ಕಾರ್ಡ್ ಇಲ್ಲಿ ಬಳಸಿ, ಸಂದರ್ಭಕ್ಕೆ ತಕ್ಕಂತೆ ಕಾರ್ಡ್ ಸದ್ಬಳಕೆ ಮಾಡಬಹುದು. ಈ ಯಂತ್ರದಲ್ಲಿ ಕಿಖ ಕೋಡ್ ಸ್ಕ್ಯಾನ್ ಮಾಡಿ ಟಿಕೆಟ್ ಪಡೆಯುವ ಆದುನಿಕ ವ್ಯವಸ್ಥೆ ಇರುತ್ತದೆ.
ಈ ಯಂತ್ರದಿAದ ಕಾಯ್ದಿರಿಸದ (uಟಿಡಿesಡಿveಜ ) ಟಿಕೆಟ್ ಪಡೆಯುವ ಪ್ರತಿ ಪ್ರಯಾಣಿಕರಿಗೆ ೧೫೦ ಕಿಲೋ ಮೀಟರಿಗೆ ೩%, ೧೫೦ ಯಿಂದ ೫೦೦ ಕಿಲೋ ಮೀಟರ್ ಗೆ ೨% ಮತ್ತು ೫೦೦ ಕಿಲೋ ಮೀಟರ್ ಗಿಂತ ಹೆಚ್ಚಿನ ದೂರದ ಪ್ರಯಾಣ ಮಾಡಲು ಟಿಕೆಟ್ ಪಡೆದವರಿಗೆ ೧% ರಿಯಾಯಿತಿ ಅವರ ಚಾಲಿತ ಸ್ಮಾರ್ಟ್ ಕಾರ್ಡ್ ಗೆ ಸಂದಾಯವಾಗುತ್ತದೆ. ಈ ರಿಯಾಯಿತಿ ಅನುಕೂಲತೆ ಯಂತ್ರ ಚಾಲಿತ ಫೆಸಿಲಿಟೇಟರ್ (ಔಠಿeಡಿಚಿಣeಡಿs) ಅವರಿಗೂ ಸಹ ದೊರೆಯುತ್ತದೆ.
ಅತ್ಯಾಧುನಿಕ ತಾಂತ್ರಿಕ ನೆರವನ್ನು ಸದ್ಬಳಕೆ ಮಾಡಿಕೊಂಡು ಂಖಿಗಿಒ ಮೂಲಕ ನೀಡಲಾಗುವ ಟಿಕೆಟ್‌ಗಳ ಪ್ರಮಾಣ ಹೆಚ್ಚಿಸುವುದು ಇಲಾಖೆಯ ಪ್ರಮುಖ ಗುರಿಯಾಗಿದೆ. ಇದು ಪ್ರಯಾಣಿಕರಿಗೆ ಅನುಕೂಲವಾಗುವುದಷ್ಟೇ ಅಲ್ಲದೆ, ಟಿಕೆಟ್ ಕೌಂಟರ್‌ಗಳ ಮೇಲಿನ ಕಾರ್ಯಭಾರವನ್ನು ಸಹ ಕಡಿಮೆ ಮಾಡುತ್ತದೆ ಎಂದು ನೈಋತ್ಯ ರೈಲ್ವೆ ಹುಬ್ಬಳ್ಳಿ ವಿಭಾಗದ ಪ್ರಕಟಣೆ ತಿಳಿಸಿದೆ.

Exit mobile version