Home News ಹಳ್ಳದಲ್ಲಿ ಬೈಕ್​ ಸಮೇತ ಕೊಚ್ಚಿ ಹೋಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

ಹಳ್ಳದಲ್ಲಿ ಬೈಕ್​ ಸಮೇತ ಕೊಚ್ಚಿ ಹೋಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

ಗದಗ: ನಿನ್ನೆ ಮಂಗಳವಾರ ಸುರಿದ ಭಾರಿ ಮಳೆಯ ಸಂಧರ್ಭದಲ್ಲಿ ಹಳ್ಳ ದಾಟುವಾಗ ನೀರಿನ ರಭಸಕ್ಕೆ ಹಳ್ಳದಲ್ಲಿ ವಾಹನದ​ ಸಮೇತ ಕೊಚ್ಚಿ ಹೋಗಿದ್ದ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.
ತಾಲೂಕಿನ ಬೆನಕೊಪ್ಪ ಗ್ರಾಮದಲ್ಲಿ ನಿನ್ನೆ ಸಂಜೆ ಹಳ್ಳ ದಾಟುವಾಗ ನೀರಿನ ರಭಸಕ್ಕೆ ಹಳ್ಳದಲ್ಲಿ ವಾಹನದ​ ಸಮೇತ ಕೊಚ್ಚಿ ಹೊಗಿದ್ದ ಮುತ್ತಪ್ಪ ಹಡಗಲಿಯ (39) ಮೃತದೇಹ ಪತ್ತೆಯಾಗಿದೆ, ಮುತ್ತಪ್ಪ ಹಿರೇಕೊಪ್ಪ ಗ್ರಾಮದವನಾಗಿದ್ದು, ಪತ್ನಿಯ ಊರು ಬೆನಕೊಪ್ಪಕ್ಕೆ ಹೊರಟಿದ್ದರು.
ಅಗ್ನಿಶಾಮಕ ದಳ, ಪೊಲೀಸ್ ಸಿಬ್ಬಂದಿಯು ಶೋಧ ಕಾರ್ಯಾಚರಣೆ ನಡೆಸಿ ಮುತ್ತಪ್ಪನ ಮೃತದೇಹ ಪತ್ತೆ ಮಾಡಿದ್ದಾರೆ. ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version