Home News ಕಾಂಗ್ರೆಸ್ ಸರ್ಕಾರ ಸಾಮಾನ್ಯ ವರ್ತಕರಿಂದ ಪಾಠ ಕಲಿಯಲಿ

ಕಾಂಗ್ರೆಸ್ ಸರ್ಕಾರ ಸಾಮಾನ್ಯ ವರ್ತಕರಿಂದ ಪಾಠ ಕಲಿಯಲಿ

ಬೆಂಗಳೂರು: ವರ್ತಕರು ಹಾಗೂ ರೈತರು ಆರ್ಥಿಕ ಬಹಿಷ್ಕಾರದಿಂದ ಶತ್ರುಗಳನ್ನು ಮೂಲೆಗುಂಪು ಮಾಡಬಹುದು ಎಂಬುದನ್ನು ತೋರಿಸಿಕೊಟ್ಟಿದೆ ಇವರಿಂದ ಕಾಂಗ್ರೆಸ್ ಸರ್ಕಾರ ಪಾಠ ಕಲಿಯಲಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಹರಿಹರದ ರೈತರು ವೀಳ್ಯದೆಲೆಯನ್ನು ಪಾಕಿಸ್ತಾನಕ್ಕೆ ರಫ್ತು ಮಾಡೋದಿಲ್ಲ ಎಂದು ತಮ್ಮ ಬದ್ಧತೆ, ರಾಷ್ಟ್ರ ಪ್ರೇಮವನ್ನು ಪ್ರದರ್ಶಿಸಿದ್ದಾರೆ. ಕೋಲಾರದ ರೈತರು ನಷ್ಟ ಆದರೂ ಪರವಾಗಿಲ್ಲ, ಪಾಕಿಸ್ತಾನಕ್ಕೆ ಟೊಮ್ಯಾಟೋ ರಫ್ತಾಗೋದಿಲ್ಲ ಎಂದು ಶಪಥಗೈದಿದ್ದಾರೆ. ಮಹಾರಾಷ್ಟ್ರದ ವರ್ತಕರು ಹಾಗೂ ರೈತರು ಟರ್ಕಿ ದೇಶಕ್ಕೆ ಆಪಲ್ ರಫ್ತಿಗೆ ನಿರಾಕರಿಸಿದ್ದಾರೆ. ಆರ್ಥಿಕ ಹೊಡೆತ ಆದರೂ ಪರವಾಗಿಲ್ಲ, ದೇಶಕ್ಕಿಂತ ದೊಡ್ಡದು ಯಾವುದೂ ಇಲ್ಲ ಎಂದು ಜನಸಾಮಾನ್ಯರು ರಾಷ್ಟ್ರದ ಪರವಾಗಿ ನಿಂತಿದ್ದಾರೆ. ಆರ್ಥಿಕ ಬಹಿಷ್ಕಾರದಿಂದ ಶತ್ರುಗಳನ್ನು ಮೂಲೆಗುಂಪು ಮಾಡಬಹುದು ಎಂಬುದನ್ನು ನಮ್ಮ ರೈತಾಪಿ ವರ್ಗ ತೋರಿಸಿಕೊಟ್ಟಿದೆ. ಒಳಸುರಂಗದ ಕಾರ್ಯಸಾಧ್ಯತಾ ವರದಿಗೆ 4.7 ಕೋಟಿಯನ್ನು ಟರ್ಕಿ ದೇಶದ ಸಂಸ್ಥೆಗೆ ನೀಡಿದ ಕಾಂಗ್ರೆಸ್ ಸರ್ಕಾರ ರೈತರಿಂದ, ಸಾಮಾನ್ಯ ವರ್ತಕರಿಂದ ಪಾಠ ಕಲಿಯಲಿ ಎಂದಿದ್ದಾರೆ.

Exit mobile version