Home ತಾಜಾ ಸುದ್ದಿ ಹಳ್ಳದಲ್ಲಿ ನವಜಾತ ಶಿಶು ಬಿಟ್ಟು ಹೋದ ಪಾಪಿಗಳು

ಹಳ್ಳದಲ್ಲಿ ನವಜಾತ ಶಿಶು ಬಿಟ್ಟು ಹೋದ ಪಾಪಿಗಳು

0

ಇಳಕಲ್ : ಹಿರೇಹಳ್ಳದಲ್ಲಿ ನವಜಾತ ಗಂಡು ಶಿಶು ಒಂದನ್ನು ಸೇತುವೆ ಕೆಳಗೆ ಬಿಟ್ಟು ಹೋದ ಅಮಾನವೀಯ ಘಟನೆ ನಡೆದಿದೆ.
ಸ್ಥಳಿಯ ವ್ಯಾಪಾರಸ್ಥರು ದೇಹಬಾಧೆ ತೀರಿಸಿಕೊಳ್ಳಲು ಎಂದು ಸೇತುವೆ ಕೆಳಗೆ ಹೋದಾಗ ಅಲ್ಲಿ ಮಗುವನ್ನು ನೋಡಿದ್ದಾರೆ, ಸೇತುವೆ ಏರಿ ಬಂದು ಕೂಸು ಕೂಸು ಎಂದು ಕೂಗಾಡಿದಾಗ ಅಲ್ಲಿಯೇ ಹೊರಟಿದ್ದ ಮಹಿಳೆಯೋರ್ವಳು ಸೇತುವೆ ಕೆಳಗೆ ಹೋಗಿ ನೋಡಿದಾಗ ಮಗು ಉಸಿರಾಡುವದನ್ನು ಕಂಡು ಅದನ್ನು ಎತ್ತಿಕೊಂಡು ಬಂದಿದ್ದಾರೆ. ಕೂಡಿದ ಜನರು ಮಗುವನ್ನು ನೋಡಿ ಅಯ್ಯೋ ಪಾಪ ಎಂದು ಹೇಳುತ್ತಿದ್ದಾಗ ಮಗುವನ್ನು ಎತ್ತಿಕೊಂಡು ಬಂದ ಮಹಿಳೆ ಆ ಮಗುವನ್ನು ಮನೆಗೆ ತೆಗೆದುಕೊಂಡು ಹೋದಳು ಎಂದು ಅಲ್ಲಿ ಸೇರಿದ್ದ ಜನರು ಹೇಳಿದ್ದಾರೆ.

Exit mobile version