Home ಅಪರಾಧ ಹಣ ಕೇಳಿದ್ದಕ್ಕೆ ಕಚ್ಚಿ ಮೂಗನ್ನೇ ಕತ್ತರಿಸಿದ ಭೂಪ

ಹಣ ಕೇಳಿದ್ದಕ್ಕೆ ಕಚ್ಚಿ ಮೂಗನ್ನೇ ಕತ್ತರಿಸಿದ ಭೂಪ

0

ಬೀದರ್ (ಜಿಲ್ಲೆ) ಹುಮ್ನಾಬಾದ್: ತನಗೆ ಬರಬೇಕಾದ ಹಣವನ್ನು ಮರಳಿಸುವಂತೆ ಕೇಳಿದ್ದಕ್ಕೆ ಭೂಪನೊಬ್ಬ ಹಲ್ಲಿನಿಂದ ಕಚ್ಚಿ ಮೂಗನ್ನೇ ಕತ್ತರಿಸಿ ಹಾಕಿದ ಪೈಶಾಚಿಕ ಘಟನೆ ಪಟ್ಡಣದ ಹತ್ತಿ ಓಣಿಯಲ್ಲಿ ಮಂಗಳವಾರ ರಾತ್ರಿ 9:30ಕ್ಕೆ ಸಂಭವಿಸಿದೆ.
ಹಲ್ಲಿನಿಂದ ಕಚ್ಚಿ ಮೂಗು ಕತ್ತರಿಸಿದ ವ್ಯಕ್ತಿಯನ್ನು ಸತೀಶ ಬದವರಾಜ ತಾಂಡೂರ ಎಂದು ತಿಳುದುಬಂದಿದೆ. ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ವ್ಯಕ್ತಿಯನ್ನು ವಿರೇಶ ಅನೀಲ ಹತ್ತಿ ಎಂದು ತಿಳಿದುಬಂದಿದೆ.

ಘಟನೆ ಹಿನ್ನೆಲೆ: ಗಾಯಾಳು ವಿರೇಶ ಅನೀಲ ಹತ್ತಿ ಅವರು ತುರ್ತು ಸಂದರ್ಭದಲ್ಲಿ ಸತೀಶ ಬಸವರಾಜ ತಾಂಡೂರಗೆ ₹ 10ಸಾವಿರ ಸಾಲ ನೀಡಿದ್ದ ಎನ್ನಲಾಗಿದೆ. ಆ ಪೈಕಿ ₹ 7ಸಾವಿರ ಮರಳಿಸಿದ್ದ. ಬಾಕಿ ₹3ಸಾವಿರ ಕೊಡುವಂತೆ ಆಗಾಗ ಕೇಳಿದರೂ ಗಂಭೀರ ಪರಿಗಣಿಸದೇ ಹಾರಿಕೆ ಮಾತನಾಡುತಿದ್ದ ಎನ್ನಲಾಗಿದೆ. ಹೀಗಿರುವಾಗ ಮಂಗಳವಾರ ರಾತ್ರಿ ಹಣದ ಅವಶ್ಯಕತೆ ಇರುವ ಕಾರಣ ಮರಳಿಸುವಂತೆ ಕೇಳಿದ್ದಕ್ಕೆ ಸತೀಶ ಈ ಕೃತ್ಯ ಗೈದಿದ್ದಾನೆ ಎಂದು ತಿಳುದುಬಂದಿದೆ. ಗಾಯಾಳುವಿಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಕಲ್ಬುರ್ಗಿ ಕಳಿಸಲಾಗಿತ್ತು. ಇಂದು ಬೆಳಿಗ್ಗೆ ಹೈದ್ರಾಬಾದ್‌ಗೆ ಕಳಿಸಲಾಗಿದೆ. ಘಟನೆ ಕುರಿತು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಂ.ಎಲ್.ಸಿ ಭೇಟಿ: ಸ್ಥಳಕ್ಕೆ ಭೇಟಿನೀಡಿದ ಎಂ.ಎಲ್.ಸಿ ಭೀಮರಾವ ಪಾಟೀಲ ಗಾಯಾಳುವನ್ನು ಚಿಕಿತ್ಸೆಗಾಗಿ ಕಲ್ಬುರ್ಗಿ ಕಳಿಸಿದ್ದಾರೆ. ಚಿಕಿತ್ಸೆಗೆ ತಗಲುವ ವೆಚ್ಚ ಬಸವರಾಜ ಪಾಟೀಲ ಟ್ರಸ್ಟ್ ವತಿಯಿಂದ ಭರಿಸುವುದಾಗಿ ಅಭಯ ನೀಡಿದ್ದಾರೆ. ಆದರೇ ತಪ್ಪಿತಸ್ತ ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಸಂಯುಕ್ತ ಕರ್ನಾಟಕ ಮೂಲಕ ಪೊಲೀಸರಿಗೆ ಸೂಚಿಸಿದರು.

Exit mobile version