Home ತಾಜಾ ಸುದ್ದಿ ಸುಹಾಸ್ ಶೆಟ್ಟಿ ಹತ್ಯೆ: ಎನ್‌ಐಗೆ ವಹಿಸಲು ಅಭ್ಯಂತರವಿಲ್ಲ

ಸುಹಾಸ್ ಶೆಟ್ಟಿ ಹತ್ಯೆ: ಎನ್‌ಐಗೆ ವಹಿಸಲು ಅಭ್ಯಂತರವಿಲ್ಲ

0

ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ ತನಿಖೆಯನ್ನು ಎನ್‌ಐಎ ಗೆ ನೀಡಲು ನಮ್ಮದೇನು ಅಭ್ಯಂತರವಿಲ್ಲ ಎಂದು ವಿಧಾನಸಭೆ ಸ್ಪೀಕರ್ ಯು.ಟಿ ಖಾದರ್ ಹೇಳಿದ್ದಾರೆ.
ನಗರದಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತನಿಖೆಯನ್ನು ಎನ್‌ಐಎಗೆ ವಹಿಸಬೇಕೆಂಬ ಬಿಜೆಪಿಗರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸುವ ವಿಶ್ವಾಸವಿದೆ. ಈ ಕುರಿತು ಆಡಳಿತ ಪಕ್ಷ, ಪ್ರತಿಪಕ್ಷ ಇದೆ ಅವರವರು ಮಾತನಾಡಿಕೊಳ್ಳಲಿ ಎಂದು ಹೇಳಿದರು.
ಪ್ರಕರಣದ ತನಿಖೆಯನ್ನು ಎನ್‌ಐಎ ಗೆ ಕೊಡಲು ನಮ್ಮದೇನು ಅಭ್ಯಂತರವಿಲ್ಲ, ಯಾರು ತನಿಖೆ ಮಾಡಬೇಕೆಂದು ಸರ್ಕಾರ ತೀರ್ಮಾನಿಸಲಿ. ಪ್ರಕರಣದ ಆರೋಪಿಗಳ ಬಂಧನವಾಗಿದೆ.
ಕೃತ್ಯ ಎಸಗಿದವರು ತಪ್ಪಿಸಿಕೊಳ್ಳದ ರೀತಿ ಪೊಲೀಸರು ಮಾಡಿದ್ದಾರೆ, ಆರೋಪಿಗಳಿಗೆ ಕಠಿಣ ಶಿಕ್ಷೆ ಆಗಬೇಕು. ಪೊಲೀಸರು ಈ ಬಗ್ಗೆ ಕ್ರಮ ವಹಿಸುತ್ತಾರೆ ಅಲ್ಲದೆ ಯಾರನ್ನು ಕೊಲ್ಲುವ ಅಧಿಕಾರ ಯಾರಿಗೂ ಇಲ್ಲ ಹಾಗಾಗಿ ಎಲ್ಲಾ ರೀತಿಯ ತನಿಖೆ ಮಾಡಬೇಕು. ಮುಂದೆ ಯಾರು ಸಹ ಈ ರೀತಿ ಕೃತ್ಯ ಎಸಗಬಾರದು, ಪೊಲೀಸರು ಸಹ ಸರಿಯಾದ ವರದಿಯನ್ನು ಸಲ್ಲಿಸಬೇಕು ಎಂದು ಹೇಳಿದರು.
ತಪ್ಪು ಮಾಡಿದವರನ್ನು ಬೆಂಬಲಿಸುವ ವ್ಯಕ್ತಿ ನಾನಲ್ಲ. ಉದ್ವಿಗ್ನ ವಾತಾವರಣ ನಿಯಂತ್ರಿಸಲು ವಿಷಯ ಮುಚ್ಚಿಡದೆ ಸತ್ಯವನ್ನು ಹೇಳಿದ್ದೇನೆ. ನನಗೆ ಸಿಕ್ಕ ಮಾಹಿತಿಯನ್ನು ಹೇಳಿದ್ದೆ. ಕೊಟ್ಟ ಮಾಹಿತಿಯನ್ನು ಗೌಪ್ಯವಾಗಿ ಇಡದೆ ಜನರ ಮುಂದೆ ಇಟ್ಟಿದ್ದೆ. ಪೊಲೀಸರು ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಂಡಿದ್ದಾರೆ. ದೇವರು, ದೇವರಂತ ಕ್ಷೇತ್ರದ ಜನ, ಆಶೀರ್ವಾದ ಮಾಡುವ ಧಾರ್ಮಿಕ ಮುಖಂಡರು ನಮ್ಮ ಜೊತೆ ಇರುವಾಗ ಟೀಕೆ ಮಾಡುವವರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ ಎಂದರು.

Exit mobile version