Home News ಸಿದ್ದರಾಮಯ್ಯರಿಂದ ಮಠಗಳಿಗೆ ಅಲೆಯುವ ನಾಟಕ: ಶೆಟ್ಟರ್

ಸಿದ್ದರಾಮಯ್ಯರಿಂದ ಮಠಗಳಿಗೆ ಅಲೆಯುವ ನಾಟಕ: ಶೆಟ್ಟರ್

ಲಕ್ಷ್ಮೇಶ್ವರ: ಕಾಂಗ್ರೆಸ್‌ನವರು ಮೊದಲು ಮಠ ಮಾನ್ಯಗಳಿಂದ ದೂರ ಇದ್ರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮೊದಲು ಸ್ವಾಮಿಗಳು ಅಂದ್ರೆ ಬೇಡ ಅಂತಿದ್ರು ಈಗ ಅನೇಕ ಮಠಗಳಿಗೆ ಅಲೆಯುತ್ತಾ ನಾಟಕವಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್ ಲೇವಡಿ ಮಾಡಿದರು.
ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ, ಡಿಕೆಶಿ ಧರ್ಮ ಒಡೆಯಲು ಹೊರಟಿದ್ರು ಧರ್ಮದ ಬಗ್ಗೆ ಸ್ವಾಮೀಜಿ ಮುಂದೆ ಪಶ್ಚಾತ್ತಾಪ ಪಟ್ಟಿದ್ದಾರೆ, ಮರುದಿನವೇ ಆ ತರನಾಗಿ ಹೇಳಿಲ್ಲಾ ಅಂತ ಉಲ್ಟಾ ಹೊಡೆದ್ರು ಎಂದ ಅವರು ಸಿದ್ದರಾಮಯ್ಯ ಜವಾಬ್ದಾರಿ ಸ್ಥಾನದಲ್ಲಿದ್ದರು ನಾಟಕ ಮಾಡುವುದನ್ನು ಬಿಡ್ರಿ, ಡಿಕೆಶಿ ಸಹ ಗದಗ ಜಿಲ್ಲೆ ಶಿರಹಟ್ಟಿಯಲ್ಲಿ ತಪ್ಪೊಪ್ಪಿಕೊಂಡಿದ್ದಾರೆ ರಾಜಕಾರಣಕ್ಕಾಗಿ ಕಾಂಗ್ರೆಸ್‌ನವರು ಏನ್‌ಬೇಕಾದ್ರು ಮಾಡಲು ತಯಾರಾಗಿದ್ದಾರೆ ಎಂದರು.
ಮಾಂಸ ಸೇವಿಸಲು ಬೇಡ ಎಂದಿಲ್ಲ, ಆದ್ರೆ ಯಾವಾಗ್ ತಿನ್ನಬೇಕು, ಯಾವಾಗ ಬೇಡ ಎಂಬ ಶಿಸ್ತು ಸಿದ್ದರಾಮಯ್ಯನವರಿಗಿಲ್ಲ ಮಾಂಸ ತಿಂದು ದೇವಸ್ಥಾನಕ್ಕೆ ಹೋಗ್ತಿನಿ ಎಂಬ ಅಂಹಕಾರ ಅವರ ಸಂಸ್ಕೃತಿ ಬಿಂಬಿಸುತ್ತೆ, ಹಿಂದು ಪರಂಪರಗೆ ಸಿದ್ದರಾಮಯ್ಯ ವ್ಯತಿರಿಕ್ತ ವ್ಯಕ್ತಿ ಎಂದು ಟೀಕಿಸಿದರು.

jagadish shettar
Exit mobile version