Home ನಮ್ಮ ಜಿಲ್ಲೆ ಕಲಬುರಗಿ ರಾಜ್ಯಾಧ್ಯಕ್ಷರಾಗಲು ಹತ್ತಾರು ಜನರು ಅರ್ಹರಿದ್ದಾರೆ: ಸುನೀಲಕುಮಾರ

ರಾಜ್ಯಾಧ್ಯಕ್ಷರಾಗಲು ಹತ್ತಾರು ಜನರು ಅರ್ಹರಿದ್ದಾರೆ: ಸುನೀಲಕುಮಾರ

ರಾಜ್ಯಾಧ್ಯಕ್ಷರಾಗಿ ಕೆಲಸ ಮಾಡುವದಕ್ಕೆ ನನ್ನಂತ ಹತ್ತಾರು ಜನರಿಗೆ ಯೋಗ್ಯತೆ, ಅರ್ಹತೆ ಇದೆ. ಪಕ್ಷ ಯಾವ ಜವಾಬ್ದಾರಿಯನ್ನು ನನಗೆ ಕೊಟ್ಟರು ನಿಭಾಯಿಸುತ್ತೇನೆ. ಅದರಲ್ಲಿ ಎರಡನೇ ಮಾತಿಲ್ಲ ಎಂದು ಇಂಧನ ಸಚಿವ ಸುನೀಲಕುಮಾರ ಹೇಳಿದರು.
ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಕೇಳಿಬರುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನಾನೊಬ್ಬ ಪಕ್ಷದ ಸಾಮಾನ್ಯ ಕಾರ್ಯಕರ್ತ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದೂ ನನಗೆ ಗೊತ್ತಿರಲಿಲ್ಲ. ನಮ್ಮ ಹಿರಿಯರು ನನಗೆ ಸೂಚನೆ ಕೊಟ್ಟ ಹಿನ್ನೆಲೆಯಲ್ಲಿ ಚುನಾವಣೆಗೆ ಸ್ಪರ್ಧೆ ಮಾಡಿದ್ದೆ. ನಮಗೆ ಈಗಿರುವಂತಹ ಗುರಿ ಮುಂದಿನ ಚುನಾವಣೆನಲ್ಲಿ 130 ರಿಂದ 150 ಸ್ಥಾನ ಗೆಲ್ಲುವುದಾಗಿದೆ. ಗೆಲ್ಲಲು ಬೇಕಾದಂತಹ ಕಾರ್ಯತಂತ್ರ ಮಾಡುತ್ತಿದ್ದೇವೆ ಎಂದರು.

ಸುನೀಲಕುಮಾರ
Exit mobile version