Home ಅಪರಾಧ ಸಿಎಂ ನೋಡಲು ಬಂದಿದ್ದ ಯುವಕನಿಗೆ ವಿದ್ಯುತ್‌ ಶಾಕ್

ಸಿಎಂ ನೋಡಲು ಬಂದಿದ್ದ ಯುವಕನಿಗೆ ವಿದ್ಯುತ್‌ ಶಾಕ್

0

ಚಿಕ್ಕೋಡಿ: ಸಿಎಂ ಸಿದ್ದರಾಮಯ್ಯರನ್ನು ನೋಡಲು ಹೋಗಿದ್ದ ಯುವಕನೊಬ್ಬ ವಿದ್ಯುತ್ ಶಾಕ್ ಹೊಡೆಸಿಕೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಜುಗುಳ ಗ್ರಾಮದಲ್ಲಿ ನಡೆದಿದೆ.
ಮಹೇಶ್ ಹುಣ್ಣರಗಿ(22) ಎಂಬಾತನೆ ವಿದ್ಯುತ್ ತಗುಲಿ ಗಂಭೀರ ಗಾಯಗೊಂಡಿದ್ದಾನೆ. ಪ್ರವಾಹ ಪರಿಸ್ಥಿತಿ ವೀಕ್ಷಣೆಗೆಂದು ಬಂದಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ನೋಡಲು ಮೇಲ್ಛಾವಣಿ ಮೇಲೆ ಹತ್ತಿದ್ದ ಯುವಕ ಮಹೇಶ್‌ನಿಗೆ ವಿದ್ಯುತ್ ತಗುಲಿ ಮುಖ, ಕೈ ಭಾಗಕ್ಕೆ ಗಂಭೀರ ಗಾಯವಾಗಿದೆ. ಮುಖ್ಯಮಂತ್ರಿ ಕಾರ್ಯಕ್ರಮದ ಆಂಬ್ಯುಲೆನ್ಸ ಸಹಾಯದಿಂದ ಕೂಡಲೇ ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

Exit mobile version