Home ಅಪರಾಧ ಸಾಮೂಹಿಕ ವರ್ಗಾವಣೆಗೆ ಪೊಲೀಸರಿಂದ ಎಸ್ಪಿಗೆ ಮನವಿ ಸಲ್ಲಿಕೆ

ಸಾಮೂಹಿಕ ವರ್ಗಾವಣೆಗೆ ಪೊಲೀಸರಿಂದ ಎಸ್ಪಿಗೆ ಮನವಿ ಸಲ್ಲಿಕೆ

0

ರಾಯಚೂರು: ದೇವದುರ್ಗ ಶಾಸಕಿಯ ಪುತ್ರನಿಂದ ಪೇದೆ‌ ಮೇಲೆ ಹಲ್ಲೆ ಪ್ರಕರಣದ ಹಿನ್ನಲೆಯಲ್ಲಿ ರಕ್ಷಣೆ ಕೋರಿ 59 ಪೊಲೀಸರು, ವರ್ಗಾವಣೆ ಬಯಸಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಿದ್ದಾರೆ.

ಜಿಲ್ಲಾ‌ ಪೊಲೀಸ್ ವರಿಷ್ಠಾಧಿಕಾರಿ ಬಿ.ನಿಖಿಲ್ ಅವರಿಗೆ ಮನವಿ ಸಲ್ಲಿಸಿದ್ದು, ಜೂಜಾಟ, ಅಕ್ರಮ ಮರಳು ದಂಧೆ, ಇಸ್ಪೀಟ್, ಕೋಳಿ ಪಂದ್ಯ, ಐಎಂವಿ, ಡಿಡಿ ಪ್ರಕರಣಗಳಲ್ಲಿ ರೇಡ್ ಮಾಡಿದಾಗ, ರಾಜಕಾರಣಿಗಳು ಹಸ್ತಕ್ಷೇಪ ಮಾಡುತ್ತಿದ್ದಾರೆ. ಪ್ರಕರಣ ದಾಖಲಿಸುವಾಗ ನಮ್ಮ ಬೆಂಬಲಿಗರು ಹೌದೋ ಅಲ್ಲವೋ ಎಂದು ಖಚಿತಪಡಿಸಬೇಕು ಎಂದು ಹೇಳುತ್ತಿದ್ದಾರೆ ಎಂಬ ಆರೋಪ ಮಾಡಿದ್ದಾರೆ.

Exit mobile version