Home ನಮ್ಮ ಜಿಲ್ಲೆ ಕಲಬುರಗಿ ಸರ್ವ ಪಕ್ಷಗಳಿಗೂ ನಾನೇ ವಿಪಕ್ಷ ನಾಯಕ

ಸರ್ವ ಪಕ್ಷಗಳಿಗೂ ನಾನೇ ವಿಪಕ್ಷ ನಾಯಕ

0

ಕಲಬುರಗಿ: ಮಧ್ಯಪ್ರದೇಶ ರಾಜ್ಯದಲ್ಲಿ ಹೇಗೆ ಬದಲಾಗಿದಿಯೋ ಹಾಗೆ ಲೋಕಸಭೆ ಚುನಾವಣೆ ಮುಗಿದ ಬಳಿಕ ರಾಜ್ಯದಲ್ಲೂ ಬದಲಾವಣೆ ಗಾಳಿ ಬೀಸಲಿದೆ ಎಂದು ಬಿಜೆಪಿ ಹಿರಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಭವಿಷ್ಯ ನುಡಿದರು.
ನಗರದಲ್ಲಿ ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ರಾಜ್ಯದ ೨೮ ಸಂಸದರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಜಯ ತಂದುಕೊಡುವುದಾಗಿ ಹೇಳಿದ್ದಾರೆ. ಅದೇ ರೀತಿ ರಾಜ್ಯ ನಾಯಕರು ೨೮ಕ್ಕೆ ೨೮ ಸೀಟು ಗೆಲ್ಲಿಸಿ ತರಬೇಕಲ್ಲವೇ, ವಿಲನ್ ಇದ್ದರೇನೆ ಹಿರೋಗೆ ಕಿಮ್ಮತ್ತು, ಇಲ್ಲದಿದ್ದರೆ ವಿಲನ್ ಯಾರ ಜೊತೆ ಫೈಟ್ ಮಾಡಬೇಕು, ಬಿಜೆಪಿ ಅಷ್ಟೇ ಎಲ್ಲ ಪಕ್ಷಗಳಲ್ಲೂ ಈ ರೀತಿ ತಾರತಮ್ಯ ನಡೆದಿದೆ. ಸರ್ವಪಕ್ಷಗಳಿಗೂ ನಾನೇ ವಿರೋಧ ಪಕ್ಷದ ನಾಯಕನಾಗಿ ಕೆಲಸ ಮಾಡುವ ಪರಿಸ್ಥಿತಿ ತಲೆದೋರಿದೆ ಎಂದರು.

Exit mobile version