Home ಅಪರಾಧ ಸರ್ಕಾರಿ ಕಟ್ಟಡಕ್ಕೆ ಕನ್ನ: ಒತ್ತುವರಿ ಕಡತಗಳೇ ಕಳ್ಳತನ…

ಸರ್ಕಾರಿ ಕಟ್ಟಡಕ್ಕೆ ಕನ್ನ: ಒತ್ತುವರಿ ಕಡತಗಳೇ ಕಳ್ಳತನ…

0

ಚಿಕ್ಕೋಡಿ: ಸರ್ಕಾರಿ ಕಟ್ಟಡಕ್ಕೆ ಕನ್ನ ಹಾಕಿ ದರೋಡೆ ಮಾಡಿದ ಘಟನೆ ನಡೆದಿದೆ.
ಬೆಳಗಾವಿಯಲ್ಲಿ ಹದಗೆಟ್ಟ ಕಾನೂನು ಸುವವ್ಯವಸ್ಥೆಯಿಂದಾಗಿ, ಚಿಂಚಲಿ ಪಟ್ಟಣ ಪಂಚಾಯ್ತಿಯಲ್ಲಿ ಸರ್ಕಾರಿ ಕಟ್ಟಡಕ್ಕೆ ಕನ್ನ ಹಾಕಿದ ಖದೀಮರು ಕಡತಗಳು ಕಳ್ಳತನ ಮಾಡಿದ್ದಾರೆ, ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಚಿಂಚಲಿ ಪಟ್ಟಣ ಪಂಚಾಯ್ತಿ ಕಾರ್ಯಾಲಯದಲ್ಲಿ ಕಳ್ಳತನ ಮಾಡಲಾಗಿದ್ದು ಕಾರ್ಯಾಲಯದ ಬಾಗಿಲು ಮುರಿದು ಲಾಕರ್‌ನಲ್ಲಿರುವ ಠರಾವು ಪುಸ್ತಕಗಳನ್ನು ಖದೀಮರು ಕಳ್ಳತನ ಮಾಡಿದ್ದಾರೆ, ಸರ್ಕಾರಿ ಜಾಗ ಒತ್ತುವರಿ ಮಾಡಿಕೊಂಡಿದ್ದ ಕಡತಗಳೇ ಕಳ್ಳತನವಾಗಿದ್ದರಿಂದ, ಇದರ ಹಿಂದೆ ಪ್ರಭಾವಿಗಳ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.
ಕಾರ್ಯಾಲಯದ ಸಿಸಿಟಿವಿ ಕ್ಯಾಮರಾಗಳನ್ನು ಗೋಡೆಕಡೆ ಮುಖಮಾಡಿಸಿ ಕಳ್ಳತನ ಮಾಡಿದ್ದಾರೆ. ಇಂದು ನಸುಕಿನ ಕಚೇರಿ ಸ್ಚಚ್ಚತೆಗೆಂದು ಬಂದ ಕಾರ್ಮಿಕ ಸಿಬ್ಬಂದಿಯಿಂದ ಈ ಪ್ರಕರಣ ಬೆಳಕಿಗೆ ಬಂದಿದೆ, ಕೂಡಲೇ ಸ್ಥಳಕ್ಕೆ ಕುಡಚಿ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ, ಈ ಪ್ರಕರಣ ಕುಡಚಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Exit mobile version