Home ತಾಜಾ ಸುದ್ದಿ ಭ್ರಷ್ಟರನ್ನು ಹೊರಗಿಟ್ಟು ಕೆಲಸ ಮಾಡಬೇಕಾಗಿದೆ

ಭ್ರಷ್ಟರನ್ನು ಹೊರಗಿಟ್ಟು ಕೆಲಸ ಮಾಡಬೇಕಾಗಿದೆ

0

ಆಯೋಗಕ್ಕೆ ದೃಷ್ಟಿ ಹಾಗೂ ಶ್ರವಣ ದೋಷ

ಬೆಂಗಳೂರು: ಅಧಿವೇಶನದಲ್ಲಿ ನಾವು ಆಯೋಗದಲ್ಲಿ ಬದಲಾವಣೆಗಳು ಆಗಬೇಕಾಗಿದೆ, ವೃತ್ತಿಪರತೆ ಬರಬೇಕಾಗಿದೆ, ಭ್ರಷ್ಟರನ್ನು ಹೊರಗಿಟ್ಟು ಕೆಲಸ ಮಾಡಬೇಕಾಗಿದೆ ಎಂದು ಮನವಿ ಮಾಡಿದರೂ ಸಹ ಆಯೋಗಕ್ಕೆ ದೃಷ್ಟಿ ಹಾಗೂ ಶ್ರವಣ ದೋಷ ಇದ್ದಂತೆ ಭಾಸವಾಗುತ್ತದೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿ ಆಯೋಗ ಮತ್ತೊಮ್ಮೆ ತನ್ನ ಹಳೆ ಚಾಳಿಯನ್ನು ಮುಂದುವರೆಸಿ ಭಾಷಾಂತರ ತಪ್ಪುಗಳನ್ನು ಮಾಡಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಪ್ರತಿ ನಿಮಿಷ/ಸೆಕೆಂಡು ಸಹ ಪ್ರಮುಖವಾಗಿರುತ್ತದೆ, ಪರೀಕ್ಷಾರ್ಥಿಗಳು ಗೊಂದಲ ಪರಿಹಾರದಲ್ಲೇ ಸಮಯ ಕಳೆದರೆ ಅವರಿಗೆ ಉತ್ತಮ ಅಂಕ ಬರಲು ಸಾಧ್ಯವೇ ಇಲ್ಲ.

ಅಧಿವೇಶನದಲ್ಲಿ ಅಷ್ಟು ಸಲಹೆ, ಸೂಚನೆ, ಚರ್ಚೆ, ನಡೆದರೂ ಸಹ ಆಯೋಗ ಮಾತ್ರ Old Habits Die Hard ಅನ್ನುವ ಹಾಗೆ ತನ್ನ ಹಳೆ ಚಾಳಿಯನ್ನು ಮುಂದುವರೆಸಿದೆ.

ಈ ಪ್ರಶ್ನೆ ಪತ್ರಿಕೆ ಸಿದ್ದಪಡಿಸಿದ ಅಧಿಕಾರಿ/ಸಿಬ್ಬಂದಿಯನ್ನು ಸರ್ಕಾರ ಕೂಡಲೇ ಅಮಾನತಿನಲ್ಲಿಟ್ಟು ಸರ್ಕಾರ ಆಯೋಗದಲ್ಲಿ ಯಾವುದೇ ಅಶಿಸ್ತಿಗೆ, ತಪ್ಪು ಒಪ್ಪುಗಳನ್ನು ಸಹಿಸುವುದಿಲ್ಲ ಎಂಬ ಮೇಲ್ಪಂಕ್ತಿಯನ್ನು ಹಾಕಿಕೊಡಲಿ ಎಂದು ಆಗ್ರಹಿಸಿದ್ದಾರೆ.

Exit mobile version