Home ತಾಜಾ ಸುದ್ದಿ ಸದಾಶಿವ ಎಸ್ ಶೆಟ್ಟರ್ ಪ್ರತಿಮೆಗೆ ಗಣ್ಯರಿಂದ ಮಾಲಾರ್ಪಣೆ

ಸದಾಶಿವ ಎಸ್ ಶೆಟ್ಟರ್ ಪ್ರತಿಮೆಗೆ ಗಣ್ಯರಿಂದ ಮಾಲಾರ್ಪಣೆ

0

ಹುಬ್ಬಳ್ಳಿ: ದಿವಂಗತ ಸದಾಶಿವ್ ಶೆಟ್ಟರ್‌ರವರ ಪುಣ್ಯ ಸ್ಮರಣೆ ನಿಮಿತ್ತ ಹುಬ್ಬಳ್ಳಿಯ ಕೋರ್ಟ್ ಸರ್ಕಲ್‌ನಲ್ಲಿರುವ ಪುತ್ತಳಿಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಹಾಗೂ ಮಾಜಿ ಸಿಎಂ ಜಗದೀಶ್​ ಶೆಟ್ಟರ್ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದರು.
ಜನಸಂಘದ ಕಾರ್ಯಕರ್ತರಾಗಿ ದಕ್ಷಿಣ ಭಾರತದ ಮೊದಲ ಜನಸಂಘದ ಶಾಸಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿ, ಪಕ್ಷನಿಷ್ಠೆ, ಹೋರಾಟದ ಮೂಲಕವೇ ಜನಮೆಚ್ಚುಗೆ ಗಳಿಸಿ, ಭಾರತೀಯ ಜನತಾ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಲು ಶ್ರಮಿಸಿದ, ದಿ. ಸದಾಶಿವ ಎಸ್ ಶೆಟ್ಟರ್ ಅವರ ಪುಣ್ಯತಿಥಿಯಂದು ಗಣ್ಯರು ಪುತ್ತಳಿಗೆ ಮಾಲಾರ್ಪಣೆ ಮಾಡಿ, ಗೌರವ ನಮನ ಸಲ್ಲಿಸಿದರು.

Exit mobile version