Home ತಾಜಾ ಸುದ್ದಿ ಸಂಡೂರಿನಲ್ಲಿ ಮನೆ ಮಾಡಿದ‌ ರೆಡ್ಡಿ

ಸಂಡೂರಿನಲ್ಲಿ ಮನೆ ಮಾಡಿದ‌ ರೆಡ್ಡಿ

0

ಬಳ್ಳಾರಿ: ಸಂಡೂರು ಉಪಚುನಾವಣೆ ಘೋಷಣೆ ಹಿನ್ನೆಲೆಯಲ್ಲಿ ಮಾಜಿ ಸಚಿವ ಜಿ.ಜನಾರ್ದನರೆಡ್ಡಿ ಸಂಡೂರಿನಲ್ಲಿ‌ ವಾಸ್ತವ್ಯ ಹೂಡಲು ನೂತನ ಗೃಹ ಪ್ರವೇಶ ಮಾಡಿದ್ದಾರೆ.
ನ.೧೩ರಂದು ಸಂಡೂರು ಕ್ಷೇತ್ರಕ್ಕೆ ಉಪ ಚುನಾವಣೆ ‌ನಡೆಯಲಿದೆ. ಇನ್ನು ಟಿಕೆಟ್ ಯಾರಿಗೆ ಎನ್ನುವುದು ಅಂತಿಮವಾಗಿಲ್ಲ. ಆದರೂ ಪ್ರಚಾರ ತುರುಸು ಪಡೆದುಕೊಂಡಿದೆ. ಜಿದ್ದಾ ಜಿದ್ದಿನ ಕಣವಾಗಿ ಮಾರ್ಪಟ್ಟಿದ್ದು, ಕಾಂಗ್ರೆಸ್ ಪಾಳಯಕ್ಕೆ ಟಕ್ಕರ್ ಕೊಡಲು ರೆಡ್ಡಿ ಸಂಡೂರಿನಲ್ಲಿ ವಾಸ್ತವ್ಯ ಹೂಡಿ ಪ್ರಚಾರ ನಡೆಸಲಿಕ್ಕೆಂದು ತಾತ್ಕಾಲಿಕ ‌ಮನೆ ಮಾಡಿದ್ದು, ವಿಶೇಷ ಪೂಜೆಯೊಂದಿಗೆ ಗೃಹ ಪ್ರವೇಶ ಮಾಡಿದರು. ಪತ್ನಿ ಅರುಣಾಲಕ್ಷ್ಮೀ, ಸಹೋದರ ಸೋಮಶೇಖರ್ ರೆಡ್ಡಿ ಸೇರಿ ಹಲವರು ಇದ್ದರು.

Exit mobile version