Home ತಾಜಾ ಸುದ್ದಿ ಶ್ರೀರಾಯರ ಹುಂಡಿಯಲ್ಲಿ 3.56 ಕೋಟಿ ರೂ. ಕಾಣಿಕೆ ಸಂಗ್ರಹ

ಶ್ರೀರಾಯರ ಹುಂಡಿಯಲ್ಲಿ 3.56 ಕೋಟಿ ರೂ. ಕಾಣಿಕೆ ಸಂಗ್ರಹ

0

ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳವರ ಹುಂಡಿಗೆ ಭಕ್ತರು ಹಾಕಿರುವ ಕಾಣಿಕೆಯು 3.56 ಕೋಟಿ ರೂ.ಗಳ ಸಂಗ್ರಹಣೆಯಾಗಿವೆ.
ಕಳೆದ 25 ದಿನಗಳ ಕಾಲ ಶ್ರೀರಾಘವೇಂದ್ರ ಸ್ವಾಮಿಗಳವರ ಹುಂಡಿಗೆ ಭಕ್ತರು ಹಾಕಿರುವ ಕಾಣಿಕೆಯ ಹಣವನ್ನು ಸೋಮವಾರ ಬೆಳಿಗ್ಗೆಯಿಂದ ಎಣಿಕೆ ಕಾರ್ಯ ನಡೆಸಲಾಯಿತು. 3,46,84,817 ರೂ.ಗಳ ಮೌಲ್ಯದ ನೋಟುಗಳು, 9,19,780 ಮೌಲ್ಯದ ನಾಣ್ಯಗಳು ಸೇರಿದಂತೆ ಒಟ್ಟು 3.56,84,817 ರೂ.ಗಳು. ಅಲ್ಲದೇ 64 ಗ್ರಾಂ ಚಿನ್ನ, 1900 ಗ್ರಾಂ ಬೆಳ್ಳಿ(ರಜತ)ಯನ್ನು ಭಕ್ತರು ಶ್ರೀಗುರುರಾಯರ ಹುಂಡಿಗೆ ಸಮರ್ಪಣೆ ಮಾಡಿದ್ದಾರೆ ಎಂದು ಶ್ರೀಮಠದ ವ್ಯವಸ್ಥಾಪಕರು ತಿಳಿಸಿದ್ದಾರೆ.

Exit mobile version