Home ತಾಜಾ ಸುದ್ದಿ ಬೆಂಗಳೂರು ವಿವಿ ನಿವೃತ್ತ ಉಪ ಕುಲಪತಿ ಪ್ರೊ.ಎಂ.ಎಸ್.ತಿಮ್ಮಪ್ಪ ನಿಧನ

ಬೆಂಗಳೂರು ವಿವಿ ನಿವೃತ್ತ ಉಪ ಕುಲಪತಿ ಪ್ರೊ.ಎಂ.ಎಸ್.ತಿಮ್ಮಪ್ಪ ನಿಧನ

0

ಬೆಂಗಳೂರು: ಮಾಜಿ ಉಪಕುಲಪತಿ ಪ್ರೊ.ಎಂ.ಎಸ್. ತಿಮ್ಮಪ್ಪ (83) ನಿಧನರಾಗಿದ್ದಾರೆ.
ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರು, ಚಿಕಿತ್ಸೆ ಫಲಕಾರಿಯಾಗದೆ, ಮಂಗಳವಾರ ಬೆಳಗಿನ ಜಾವ 1.50ರ ಸುಮಾರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊನೆಯುಸಿರು ಎಳೆದರು.
ಮಂಚಾಲೆ ಸೂರ್ಯನಾರಾಯಣರಾವ್‌ ತಿಮ್ಮಪ್ಪ ಅವರು ಮಲೆನಾಡಿನ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಮಂಚಾಲೆಯಲ್ಲಿ 14 ನವೆಂಬರ್ 1942 ರಂದು ಜನಿಸಿದರು. ಪ್ರೊ ತಿಮ್ಮಪ್ಪ ಎರಡು ಅವಧಿಗೆ ಬೆಂಗಳೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್​ ಆಗಿ ಮತ್ತು ಅದರ ಉಪಕುಲಪತಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

Exit mobile version