Home ತಾಜಾ ಸುದ್ದಿ ವೈಭವದ ಸುತ್ತೂರು ಜಾತ್ರೆಗೆ ತೆರೆ

ವೈಭವದ ಸುತ್ತೂರು ಜಾತ್ರೆಗೆ ತೆರೆ

0

ಮೈಸೂರು: ನಿಸ್ವಾರ್ಥ ಸೇವೆಯ ಮೂಲಕ ಲಕ್ಷಾಂತರ ಜನರ ಜೀವನದಲ್ಲಿ ಸುತ್ತೂರು ಮಠ ಬೆಳಕು ತುಂಬಿದೆ. ಮಠದ ಹಿಂದಿನ ಎಲ್ಲಾ ಪೀಠಾಧಿಪತಿ ಸ್ವಾಮೀಜಿಗಳು ದೇಶದ ಪರಂಪರೆ, ಸಂಸ್ಕೃತಿಗೆ ಮಹತ್ವದ ಕೊಡುಗೆ ನೀಡಿದ್ದು ಇದನ್ನು ಈಗಿನ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮುಂದುವರೆಸಿರುವುದು ಸಂತೋಷದ ವಿಷಯವೆಂದು ಕೇಂದ್ರ ಗೃಹ ಸಚಿವ ಅಮಿತ್‌ಶಾ ಶ್ಲಾಘಿಸಿದರು.
ಸುತ್ತೂರು ಜಾತ್ರಾ ಮಹೋತ್ಸವದ ಕೊನೆಯ ದಿನವಾದ ಭಾನುವಾರ ಕ್ಷೇತ್ರದಲ್ಲಿ ನಿರ್ಮಿಸಿರುವ ನೂತನ ಅತಿಥಿಗೃಹ ಕಟ್ಟಡದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಸಿ.ಟಿ. ರವಿ, ಸಂಸದ ಪ್ರತಾಪ್‌ಸಿಂಹ, ಪ್ರಭಾಕರ್ ಕೋರೆ ಇನ್ನಿತರರಿದ್ದರು.
ಅಯೋಧ್ಯೆಯಲ್ಲಿ ಶಾಖೆ
ಅಯೋಧ್ಯೆಯಲ್ಲಿನ ರಾಮ ಮಂದಿರದಲ್ಲಿ ರಾಮಲಲ್ಲಾ ಪ್ರಾಣ ಪ್ರತಿಷ್ಠಾಪನೆ ಸಂದರ್ಭ ಅವಿಸ್ಮರಣೀಯವಾಗಿತ್ತು. ಸುತ್ತೂರು ಮಠ ಅಲ್ಲಿಯೂ ಮಠದ ಶಾಖೆ ತೆರೆಯಲು ಮುಂದಾಗಿರುವುದನ್ನು ತಾವು ಸ್ವಾಗತಿಸುವುದಾಗಿ ಶಾ ಹೇಳಿದರು.

Exit mobile version