Home News ವಿವಾಹ ಆಗುವುದಾಗಿ ನಂಬಿಸಿ ಯುವಕನಿಂದ1.37 ಲಕ್ಷ ರೂ. ವಂಚಿಸಿದ ಯುವತಿ!

ವಿವಾಹ ಆಗುವುದಾಗಿ ನಂಬಿಸಿ ಯುವಕನಿಂದ1.37 ಲಕ್ಷ ರೂ. ವಂಚಿಸಿದ ಯುವತಿ!

ದಾವಣಗೆರೆ: ಯುವತಿಯೊಬ್ಬಳು ವಿವಾಹವಾಗುವುದಾಗಿ ನಂಬಿಸಿ ಯುವಕನಿಂದ 1.37 ಲಕ್ಷ ರೂ. ವಂಚನೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ.
ಯುವತಿಯ ಮೋಸದ ಜಾಲಕ್ಕೆ ಸಿಲುಕಿದವರು ಚೌಡೇಶ್ವರಿ ನಗರದ 26 ವರ್ಷದ ಯುವಕ. ಧಾರವಾಡದ ನಿವಾಸಿ ವರ್ಷ ಎಂಬುದಾಗಿ ಹೇಳಿಕೊಂಡಿದ್ದ ಈ ಯುವತಿ, ಇನ್ ಸ್ಟಾಗ್ರಾಂನಲ್ಲಿ ಪರಿಚಯವಾಗಿದ್ದರು. ಮದುವೆ ಆಗುವುದಾಗಿ ಯುವಕನನ್ನು ನಂಬಿಸಿ ಆತನಿಂದ ಹಂತ ಹಂತವಾಗಿ 1.37 ಲಕ್ಷ ರೂ. ಹಣವನ್ನು ಆನ್ ಲೈನ್ ಮೂಲಕ ಹಾಕಿಸಿಕೊಂಡಿದ್ದರು. ಹಾಕಿದ ಹಣವನ್ನು ಯುವಕ ವಾಪಸ್ ಕೇಳಿದಾಗ ಆತನ ಫೋನ್ ನಂಬರ್ ಬ್ಲಾಕ್ ಮಾಡಿದ್ದಾಳೆ. ಆಗ ಯುವಕನಿಗೆ ಈ ಯುವತಿ ನನ್ನಿಂದ ಹಣ ಕಿತ್ತುಕೊಳ್ಳುವ ಉದ್ದೇಶದಿಂದ ನನ್ನ ಮದುವೆ ಆಗುವುದಾಗಿ ನಂಬಿಸಿ ಮೋಸ ಮಾಡಿದ್ದಾಳೆ ಎಂಬುದು ಮೊಬೈಲ್ ನಂಬರ್ ಬ್ಲಾಕ್ ಮಾಡಿದ ಮೇಲೆ ಗೊತ್ತಾಗಿದೆ. ಈ ಕುರಿತು ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version