Home ನಮ್ಮ ಜಿಲ್ಲೆ ಉತ್ತರ ಕನ್ನಡ ವಿಮಾನದಲ್ಲಿಯೇ ಹೃದಯಾಘಾತ ಡಾಟಾ ಇರ್ಷಾದ್ ಇನ್ನಿಲ್ಲ

ವಿಮಾನದಲ್ಲಿಯೇ ಹೃದಯಾಘಾತ ಡಾಟಾ ಇರ್ಷಾದ್ ಇನ್ನಿಲ್ಲ

0

ಭಟ್ಕಳ: ಜಾಲಿ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ, ಸಮಾಜ ಸೇವಕ ಡಾಟಾ ಇರ್ಷಾದ್ ಎಂತಲೇ ಕರೆಯಿಸಿಕೊಳ್ಳುತ್ತಿದ್ದ ಕಾರ್ಗದ್ದೆ ನಿವಾಸಿ ಇರ್ಷಾದ್ ಇಕ್ಕೇರಿ(೬೭) ಅವರು ದುಬೈಗೆ ಪ್ರಯಾಣ ಬೆಳೆಸಿರುವಾಗ ವಿಮಾನದಲ್ಲಿಯೇ ತೀವ್ರ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ತಮ್ಮ ಪತ್ನಿ ಹಾಗೂ ಮಗಳೊಂದಿಗೆ ತಡರಾತ್ರಿ ಮಂಗಳೂರು-ಅಬುದಾಬಿ ವಿಮಾನದಲ್ಲಿ ದುಬೈಗೆ ಪ್ರಯಾಣ ಬೆಳೆಸಿದ್ದರು. ಆ ಸಂದರ್ಭದಲ್ಲಿ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದರಿಂದ ಮಸ್ಕತ್ ವಿಮಾನ ನಿಲ್ದಾಣದಲ್ಲಿ ವಿಮಾನ ತುರ್ತು ಭೂಸ್ಪರ್ಶ ಮಾಡಿ, ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದರಲ್ಲಿ ಮೃತಪಟ್ಟಿರುವುದಾಗಿ ಘೋಷಿಸಲಾಗಿದೆ ಎನ್ನಲಾಗಿದೆ. ಮೃತದೇಹವನ್ನು ಮಸ್ಕತ್‌ನಲ್ಲಿನ ಆಸ್ಪತ್ರೆಯಲ್ಲಿ ಇಡಲಾಗಿದೆ. ಅವರಿಗೆ ಪತ್ನಿ, ಮೂವರು ಪುತ್ರಿಯರಿದ್ದಾರೆ.

Exit mobile version