Home ತಾಜಾ ಸುದ್ದಿ ಮೇಣಬಸದಿ ಬಳಿ ಮಡಿಕೆ, ನಾಣ್ಯ ಪತ್ತೆ..!

ಮೇಣಬಸದಿ ಬಳಿ ಮಡಿಕೆ, ನಾಣ್ಯ ಪತ್ತೆ..!

0

ಬಾದಾಮಿ: ಐತಿಹಾಸಿಕ ಬಾದಾಮಿ ನಗರದ ಮೇಣಬಸದಿ ಗುಹೆಯಿಂದ ಅಗಸ್ತ್ಯತೀರ್ಥ ಹೊಂಡಕ್ಕೆ ಹೊಂದಿಕೊಂಡು ಭೂತನಾಥ ಸಮುಚ್ಚಯಕ್ಕೆ ತೆರಳುವ ಮಾರ್ಗದ ಉತ್ಖನನ ಸಂದರ್ಭದಲ್ಲಿ ಬಂಡೆಗಲ್ಲಿನ ಮೆಟ್ಟಿಲು, ಬಿಡಿಗಲ್ಲಿನ ಮೆಟ್ಟಿಲುಗಳು ಪತ್ತೆಯಾಗಿವೆ.
ಕಳೆದ ಹಲವು ದಿನಗಳಿಂದ ಇಲ್ಲಿ ಉತ್ಖನನ ಕಾರ್ಯ ಕೈಗೊಂಡಿರುವ ಇಲಾಖೆಯ ಅಧಿಕಾರಿಗಳಿಗೆ ಮೆಟ್ಟಿಲಗಳ ಜೊತೆಗೆ ಮಣ್ಣಿನ ಮಡಿಕೆಯೊಂದು ದೊರಕಿದ್ದು, ಇದರಲ್ಲಿ ಕೆಲ ಮೂಳೆ ಮತ್ತು ಒಂದು ನಾಣ್ಯ ದೊರಕಿದೆ. ಇದನ್ನು ಈಗಾಗಲೇ ಹೆಚ್ಚಿನ ಮಾಹಿತಿಗಾಗಿ ಧಾರವಾಡ ವಲಯದಲ್ಲಿರುವ ಸಂಶೋಧನಾ ಕೇಂದ್ರಕ್ಕೆ ರವಾನಿಸಲಾಗಿದೆ.
ಮೆಟ್ಟಿಲುಗಳನ್ನು ಪರಿಶೀಲಿಸಿರುವ ಅಧಿಕಾರಿಗಳು ಇದನ್ನು ವಿಶೇಷವಾಗಿ ಜೈನ ಧರ್ಮಕ್ಕೆ ಸಂಬಂಧಿಸಿದ್ದು ಎಂದು ಅಂದಾಜಿಸಿದ್ದಾರೆ.

Exit mobile version