Home ಕ್ರೀಡೆ ವಿನೇಶ್‌ ಫೋಗಟ್‌:  ತೀರ್ಪು ಆ.16ಕ್ಕೆ ಮುಂದೂಡಿಕೆ

ವಿನೇಶ್‌ ಫೋಗಟ್‌:  ತೀರ್ಪು ಆ.16ಕ್ಕೆ ಮುಂದೂಡಿಕೆ

0

ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅನರ್ಹತೆ ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಪಟ್ಟಂತೆ  ತೀರ್ಪು  ಆಗಸ್ಟ್ 16, ರಾತ್ರಿ 9.30 ರವರೆಗೆ ವಿಸ್ತರಣೆ ಮಾಡಲಾಗಿದೆ.  ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ವಿಭಾಗದಲ್ಲಿ ಜಂಟಿ ಬೆಳ್ಳಿ ಪದಕವನ್ನು ನೀಡಬೇಕೆಂದು ವಿನೇಶ್ ಫೋಗಟ್ ಮನವಿ ಸಲ್ಲಿಸಿದ್ದಾರೆ. ಈ ಮನವಿ ಮೇಲಿನ ತೀರ್ಪು ಕೊಡಲು ಕ್ರೀಡಾ ನ್ಯಾಯ ಮಂಡಳಿ (ಸಿಎಎಸ್‌) ತಾತ್ಕಾಲಿಕ ವಿಭಾಗವು ಮತ್ತೆ ವಿಸ್ತರಣೆ ಮಾಡಿದೆ. ಆಗಸ್ಟ್ 16 ರಂದು ಸ್ಥಳೀಯ ಕಾಲಮಾನ 6 ಗಂಟೆಗೆ ತೀರ್ಪು ನೀಡುವುದಾಗಿ ಹೇಳಿದೆ.
ಪ್ಯಾರಿಸ್ ಒಲಿಂಪಿಕ್ಸ್ 2024 ಮುಗಿಯುವ ಮೊದಲು   ಆ.10 ರಂದು ತೀರ್ಪು ಪ್ರಕಟಿಸುವುದಾಗಿ ಹೇಳಿತ್ತು. ನಂತರ ಆ.13 ರಂದು ಪ್ರಕಟಿಸಲಾಗುವುದು ಎಂದಿತ್ತು. ಆದರೆ ಈಗ ಮೂರನೇ ಬಾರಿ ಮುಂದೂಡಿದ್ದು, ಆ.16 ರಂದು ಪ್ರಕಟಿಸುವುದಾಗಿ ಹೇಳಿದೆ.

Exit mobile version