Home ಅಪರಾಧ ವಸತಿ ಶಾಲೆಯಿಂದ ಇಬ್ಬರು ವಿದ್ಯಾರ್ಥಿಗಳು ನಾಪತ್ತೆ

ವಸತಿ ಶಾಲೆಯಿಂದ ಇಬ್ಬರು ವಿದ್ಯಾರ್ಥಿಗಳು ನಾಪತ್ತೆ

0

ಚಿಕ್ಕಮಗಳೂರು: ತೇಗೂರು ಗ್ರಾಮದಲ್ಲಿರುವ ಎ.ಪಿ.ಜೆ. ಅಬ್ದುಲ್ ಕಲಾಂ ವಸತಿ ಶಾಲೆಯಿಂದ ಇಬ್ಬರು ವಿದ್ಯಾರ್ಥಿಗಳು ನಾಪತ್ತೆ ಆಗಿರುವ ಪ್ರಕರಣ ಬೆಳಕಿಗೆ ಬಂದಿದೆ.
೯ನೇ ತರಗತಿಯ ತರುಣ್ ಮತ್ತು ಯಶ್ವಿತ್ ಸಾಲಿಯಾನ್ ನಾಪತ್ತೆ ಆಗಿದ್ದಾರೆ. ನಾಪತ್ತೆಯಾದ ವಿದ್ಯಾರ್ಥಿಗಳು ಕಳೆದ ೧೦ ದಿನಗಳ ಹಿಂದೆ ಮಧ್ಯರಾತ್ರಿ ಶಾಲೆಯಿಂದ ಕಾಣೆಯಾಗಿದ್ದು, ಅವರು ಮನೆಗೂ ತೆರಳಿಲ್ಲ, ಅವರ ಆಸರೆಯ ಬಗ್ಗೆ ಯಾವುದೇ ಮಾಹಿತಿ ದೊರೆತಿಲ್ಲ.
ಈ ಹಿಂದೆಯೂ ಈ ಇಬ್ಬರು ವಸತಿ ಶಾಲೆಯಲ್ಲಿ ಇರಲು ಹಿಂದೇಟು ಹಾಕಿ ಓಡಿ ಹೋಗಿದ್ದರು ಎನ್ನಲಾಗಿದೆ. ಶಾಲಾ ಆಡಳಿತ ಮಂಡಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ. ಪೊಲೀಸರು ತನಿಖೆ ಕೈಗೊಂಡಿದ್ದು, ವಿದ್ಯಾರ್ಥಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.
ಮಂಗಳೂರು ಬಾಲಕನ ನಾಪತ್ತೆ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಘಟನೆ ನಡೆದಿರುವುದು ಪೋಷಕರಲ್ಲಿ ಆತಂಕ ಹೆಚ್ಚಿಸಿದೆ.

Exit mobile version