Home News ವಕ್ಫ್ ನೋಟಿಫಿಕೇಶನ್:ಬಿಜೆಪಿ ಅಧಿಕಾರದಲ್ಲಿದ್ದಾಗ ಏಕೆ ರದ್ದು ಮಾಡಲಿಲ್ಲ?

ವಕ್ಫ್ ನೋಟಿಫಿಕೇಶನ್:ಬಿಜೆಪಿ ಅಧಿಕಾರದಲ್ಲಿದ್ದಾಗ ಏಕೆ ರದ್ದು ಮಾಡಲಿಲ್ಲ?

ಬಸನಗೌಡ ಪಾಟೀಲ್ ಯತ್ನಾಳ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಧ್ಯೆ ಪೈಪೋಟಿ ನಡೆದಿದೆ

ವಿಜಯಪುರ: 1974ರಿಂದ ಇಲ್ಲಿಯವರೆಗೆ ಬಿಜೆಪಿ ಏಕೆ ಹೋರಾಟ ಮಾಡಿಲ್ಲ ಎಂದು ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಪ್ರಶ್ನಿಸಿದ್ದಾರೆ.
ಬಿಜೆಪಿ ಜಿಲ್ಲಾಮಟ್ಟದಲ್ಲಿ ನಮ್ಮ ಭೂಮಿ ನಮ್ಮ ಹಕ್ಕು ಘೋಷನೆಯಡಿ ಹೋರಾಟ ಆರಂಭಿಸಿರುವುದಕ್ಕೆ ಪ್ರತಿಕ್ರಿಯಿಸಿರುವ ಅವರು ಬಿಜೆಪಿ ಅಧಿಕಾರದಲ್ಲಿದ್ದಾಗ ಮಾಡಿದ್ದು ಏನು? ಬಿಜೆಪಿ ಅಧಿಕಾರಾವಧಿಯಲ್ಲೂ ವಕ್ಫ್ ಪರ ನೋಟೀಸ್ ನೀಡಲಾಗಿದೆ. ಪಹಣಿಯಲ್ಲಿ ವಕ್ಫ್ ಎಂದು ನಮೂದು ಮಾಡಲಾಗಿದೆ. ಬಿಜೆಪಿಯ ಆಡಳಿತ ಕಾಲದಲ್ಲಿ ಗೆಜೆಟ್ ಬಗ್ಗೆ ಹೋರಾಟ ಮಾಡಿಲ್ಲ? ಗೆಜೆಟ್ ನೋಟಿಫೀಕೇಶ್ 1974ರಿಂದ ಇದೆ, ಅವರ ಸರ್ಕಾರ ಅಧಿಕಾರದಲ್ಲಿದ್ದಾಗ ಯಾಕೆ ಅದನ್ನು ರದ್ದು ಮಾಡಲಿಲ್ಲ? ಮುಸ್ಲಿಂ ಸಮುದಾಯದವರಿಗೂ ನೋಟೀಸ್ ಜಾರಿಯಾಗಿವೆ, ಕೇವಲ ಹಿಂದೂಗಳಿಗೆ ಮಾತ್ರವಲ್ಲ, ವಕ್ಫ್ ಬೋರ್ಡ್‌ನಿಂದ ತಪ್ಪಾಗಿದ್ದರೆ ಅದರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುವುದು, 2014 ರ ಚುನಾವಣಾ ಪ್ರಣಾಳಿಕೆಯಲ್ಲಿ ವಕ್ಫ್ ಪರ ಭರವಸೆ ನೀಡಿದ್ದರು. ಸಚಿವೆ ಶೋಭಾ ಕರಂದ್ಲಾಜೆ ಸಂಸತ್‌ನಲ್ಲಿ ವಕ್ಷ ಪರವಾಗಿ ಪ್ರಶ್ನೆ ಕೇಳಿದ್ದರು. ಬಿಜೆಪಿ ರಾಜಕೀಯ ಬಿಟ್ಟು ಬೇರೇನೂ ಮಾಡುತ್ತಿಲ್ಲ, ಇಷ್ಟು ವರ್ಷ ಕುಂಭಕರ್ಣ ನಿದ್ರೆಯಲ್ಲಿದವರು ಈಗ ಎಚ್ಚೆತ್ತುಕೊಂಡಿದ್ದಾರೆ, ವಕ್ಸ್ ವಿಚಾರದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಧ್ಯೆ ಪೈಪೋಟಿ ನಡೆದಿದೆ. ವಕ್ಫ್ ಹೋರಾಟದ ಕ್ರೆಡಿಟ್‌ಗಾಗಿ ಹೋರಾಟ ನಡೆದಿದೆ ಎಂದರು.

Exit mobile version