Home ತಾಜಾ ಸುದ್ದಿ ಲ್ಯಾಂಡ್ ಜಿಹಾದ್: ‌ಒಂದು ಕೋಮಿನ ತುಷ್ಟಿಕರಣ

ಲ್ಯಾಂಡ್ ಜಿಹಾದ್: ‌ಒಂದು ಕೋಮಿನ ತುಷ್ಟಿಕರಣ

0

ನಾನ್ ಸೆನ್ಸ್ ಹೇಳಿಕೆಯನ್ನು ಕಾಂಗ್ರೆಸ್ ನವರು ಕೈ ಬಿಡಬೇಕು, ತುಷ್ಟಿಕರಣದ ಪರಾಕಷ್ಟೆಯನ್ನು ಕೈ‌ಬಿಡಬೇಕು.

ಬಳ್ಳಾರಿ: ಲ್ಯಾಂಡ್ ಜಿಹಾದ್ ಮೂಲಕ ಕಾಂಗ್ರೆಸ್ ಸರಕಾರ ‌ಒಂದು ಕೋಮಿನ ತುಷ್ಟಿಕರಣ ಮಾಡುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.
ತೋರಣಗಲ್‌ನಲ್ಲಿ ಖಾಸಗಿ ಹೋಟೆಲ್‌ನಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಅವರು ಸಾವಿರಾರು ‌ವರ್ಷಗಳ ಹಿಂದಿನ‌‌ ಮಠ ಮಾನ್ಯಗಳ, ರೈತರು ಉಳುಮೆ ಮಾಡುತ್ತಿರುವ. ಜಮೀನುಗಳನ್ನು ವಕ್ಫ ಹೆಸರಿಗೆ ಮಾಡಿ ಮುಸ್ಲೀಂ ಸಮುದಾಯದ ಒಲೈಕೆ ಮಾಡುತ್ತಿದೆ. ಹಿಂದೂಗಳ ವಿರೋಧಿ ಆಗಿರುವ ಸಿದ್ದರಾಮಯ್ಯ ಸರಕಾರ ‌ರೈತರ ಬದುಕನ್ನು ಬೀದಿಗೆ ತರುತ್ತಿದೆ ಎಂದರು.

ಜಾರ್ಖಂಡ ಮತ್ತು ಮಹಾರಾಷ್ಟ್ರ‌ ವಿಧಾನಸಭೆಯ ಸಾರ್ವತ್ರಿಕ ಹಾಗೂ ‌೪೮ ವಿವಿಧ ಕ್ಷೇತ್ರಗಳಲ್ಲಿ ಉಪಚುನಾವಣೆ ‌ನಡೆತಾ‌ ಇದೆ.
ಕರ್ನಾಟಕದಲ್ಲಿ ಮೂರು ಕಡೆ ಉಪ ಚುನಾವಣೆ ನಡೆಯುತ್ತಿದೆ. ಶಿಗ್ಗಾಂವ ಓಡಾಡಿದ್ದೆ, ನಿನ್ನೆಯಿಂದ ಸಂಡೂರು ಪ್ರಚಾರ ಮಾಡ್ತಾ‌ ಇದಿನಿ, ಮೂರು ಕಡೆ ಎನ್‌ಡಿಎಗೆ ವಿಜಯ ಸಿಗಲಿದೆ. ಎರಡು ರಾಜ್ಯದಲ್ಲಿಯೂ ಬಿಜೆಪಿ ಗೆಲ್ಲಲಿದೆ, ಹಿಂದೆ ಸಚಿವನಾಗಿ ಜಾರ್ಖಂಡ್ ‌ಜತೆ ನಿಕಟ ಸಂಪರ್ಕವಿದೆ ಮಹಾರಾಷ್ಟ್ರ, ಜಾರ್ಖಂಡ್ ಎರಡು ಕಡೆ ಅಭೂತಪೂರ್ವ ಜಯ ಸಿಗಲಿದೆ. ಕಾಂಗ್ರೆಸ್ ಒಂದು ರೀತಿಯಲ್ಲಿ ಅಲ್ಪಸಂಖ್ಯಾತ ರ ತುಷ್ಟಿಕರಣ ಮಾಡುತ್ತಿದೆ. ಪಿಎಪ್ಐ, ಎಸ್‌ಡಿಪಿಎಫ್‌ಐಗಳು ಸೆಮಿ ಮೂಮೆಂಟ್ ನ ಪೂರ್ವ ಅವತಾರಗಳು, ಸೆಮಿ‌ ನಿರ್ಭಂದ ದ ಬಳಿಕವೂ ಕೋಟ್೯ ಗೂ ಹೋಗಿದ್ದರು.‌ ಕೋಟ್೯ ಎತ್ತಿ ಹಿಡಿದಿದೆ. ಇತ್ತೀಚೆಗೆ ಮಂದಿರಗಳ‌ ಮೇಲೆ ಅಟ್ಯಾಕ್ ಮಾಡುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಆಗಿರುವ ಘಟನೆ ಅತ್ಯಂತ ಸೂಕ್ಷ್ಮ. ನಾನು ಆವತ್ತು ವಿಜಯನಗರದಲ್ಲಿದ್ದೆ ನೇರವಾಗಿ ಹುಬ್ಬಳ್ಳಿಗೆ‌ ಹೋದೆ. ಸ್ವಲ್ಪ ‌ಯಾಮಾರಿದ್ದರೆ ನೂರಾರು ಪೊಲೀಸರು ‌ಜೀವ ಕಳೆದಕೊಳ್ಳುತ್ತಿದ್ದರು. ಕಾಂಗ್ರೆಸ್ ದಲಿತ ಶಾಸಕನ ಮನೆ ಸುಟ್ಟು ಹಾಕುತ್ತಿದ್ದರು. ಈಗ ರಾಜ್ಯದಲ್ಲಿ ವಕ್ಫ‌ ಜಿಹಾದ್ ನಡೆದಿದೆ. ಸಿದ್ದರಾಮಯ್ಯ ಸೇರಿ ಕಾಂಗ್ರೆಸ್‌ನವರು ಏನು ಅನ್ಕೊಂಡಿದಾರೆ ಏನೋ? ಅವರನ್ನು ನಾನು ಹುಂಬರು ಎನ್ನಲಾರೆ, ಕಾಂಗ್ರೆಸ್ ‌ಪ್ರಣಾಳಿಕೆಯಲ್ಲಿಯೇ ವಕ್ಫ ಆಸ್ತಿಯನ್ನು ರಕ್ಷಣೆ ‌ಮಾಡ್ತಿವಿ ಅಂತ ಭರವಸೆ ಕೊಟ್ಟಿದ್ದರು ‌ಈಗ ಅದನ್ನು ‌ಮಾಡಲು ಹೊರಟಿದ್ದಾರೆ. ಪುರಾತನ ಕಾಲದ ದೇವಸ್ಥಾನ ಗಳನ್ನು ‌ಪೂರ್ಣ ವಕ್ಫ ಮಾಡಿದ್ದಾರೆ ಪಟಗನೂರಿ ಹಳ್ಳಿಯಲ್ಲಿ ಚಾಲುಕ್ಯರ ಕಾಲದ ದೇವಸ್ಥಾನ ಆಸ್ತಿಯನ್ನು ವಕ್ಫ ಮಾಡಿದ್ದಾರೆ. ೧೦೦೦ ವರ್ಷಗಳ ಹಿಂದಿನಿಂದಲೂ ಇರುವ ಭೂಮಿ ಅದು‌. ಮಠ-ಮಂದಿರಗಳನ್ನು ವಕ್ಫ ಗೆ ಸೇರ್ಪಡೆ ಮಾಡುತ್ತಾ ಇದ್ದಾರೆ. ಕಾಗಿನೆಲೆ ಮಠವನ್ನೂ ವಕ್ಫ ಮಾಡುತ್ತಿದ್ದಾರೆ. ಹೀಗೆ ಮಾಡುತ್ತಾ ಸಿದ್ದರಾಮಯ್ಯ ಅವರು ರಾಜ್ಯವನ್ನು ಏನು ಮಾಡಲು‌ ಹೊರಟಿದ್ದಾರೋ? ತಿಳಿಯುತ್ತಿಲ್ಲ. ಸಿನಿಯರ್ ಆಫೀಸರ್ ಒಬ್ಬ ಹೇಳ್ತಾನೆ ಕಾಲಂ ೧೧ ರಲ್ಲಿ ಮಾತ್ರ ಅಂತಾ ಹೇಳ್ತಾನೆ, ಮೂರ್ಖ ಆಫೀಸರ್ ಅವನ ಹೆಸರು ಹೇಳಿದರೆ ನೌಕರಿ ಹೋಗುತ್ತೆ, ಸುಪ್ರೀಂ ಕೋರ್ಟ್ ಆದೇಶ ತೊರಿಸಿದ್ದೆ. ಸ್ವಾರಿ ಸರ್ ಅಂದ.
ಇದೊಂದು ಷಡ್ಯಂತ್ರ. ಕಾಂಗ್ರೆಸ್ ದೇಶ, ರಾಜ್ಯ ಏನು ಹಾಳಾದರೂ ಪರವಾಗಿಲ್ಲ ತುಷ್ಟಿಕರಣ ಮಾಡಲು‌ ಹೊರಟಿದ್ದಾರೆ ಕಾಂಗ್ರೆಸ್‌ನವರಿಗೆ ಬುದ್ದಿ ಭ್ರಮಣೆಯಾಗಿದೆ. ವಾಸದ ಮನೆಗಳನ್ನು ವಕ್ಫ ಪ್ರಾಪಟಿ ಅಂತ ಮಾಡ್ತಾರೆ ಹುಷಾರ್ ಎಚ್ಚರವಾಗಿರಿ, ನಿಮ್ಮ ಆಸ್ತಿ ಕಬ್ಜ ಮಾಡಿಕೊಳ್ಳಿ ಇಲ್ಲವಾದರೆ‌ ನಾವು‌ ವಶಕ್ಕೆ ಪಡಿತವಿ ಅಂತ ಬಿಜೆಪಿ ಸರಕಾರ ಹೇಳಿತ್ತಾ? ನಾನ್ ಸೆನ್ಸ್ ಹೇಳಿಕೆಯನ್ನು ಕಾಂಗ್ರೆಸ್ ನವರು ಕೈ ಬಿಡಬೇಕು, ತುಷ್ಟಿಕರಣದ ಪರಾಕಷ್ಟೆಯನ್ನು ಕೈ‌ಬಿಡಬೇಕು. ಸಿಎಂ ವಿರುದ್ಧ ರಾಜ್ಯಪಾಲರು ವಿವೇಚನಾಧಿಕಾರ ಬಳಸಿ ಪ್ರಾಷಿಕ್ಯೂಷನ್ ಅನುನತಿ ಕೊಟ್ಟರು, ಸಿಎಂ ಕೋಟ್೯ ಗೆ‌ ಹೋದ್ರು. ನಾನು ಸಿಎಂ ಸಿದ್ದರಾಮಯ್ಯ ಅವರಿಗೆ ಎರಡು ಪ್ರಶ್ನೆ ಕೇಳಿದ್ದೇನೆ ಇದುವರೆಗೂ ಉತ್ತರ ನೀಡಿಲ್ಲ. ಒಂದು ವಕ್ಫ ವಿಚಾರ, ಜಮೀರ್ ಸಿಎಂ ಸೂಚನೆ ಮೇರೆಗೆ ಅದಾಲತ್ ಮಾಡಿದ್ದಾರೆ. ಎರಡನೇದು ಪ್ರಾಸಿಕ್ಯೂಷನ್ ವಿಚಾರ ಕೋಟ್೯ ಹೇಳಿದೆ ನಿಮ್ಮ ಪ್ರಭಾವ ಇಲ್ಲದೇ ಇದು ಆಗಿರಲು ಸಾಧ್ಯವಿಲ್ಲ ಎಂದಿದ್ದಾರೆ. ಆದರೂ ಇಡಿ, ಸಿಬಿಐ ಅಂತಿದಾರೆ, ಯಾವ ಈ ಸಂಸ್ಥೆಗಳು ಬಂದಿಲ್ಲ. ಇಡಿ ನಿರ್ಮಾಣ ಮಾಡಿದ್ದು ಯಾರು? ಇಡಿ ನಿಮ್ನ ಕಾಲದಲ್ಲಿ ಆಗಿದೆ ಸ್ವಾಮಿ ಸಿದ್ದರಾಮಯ್ಯ, ಯುಪಿಎ ಸರಕಾರ ‌ಇದ್ದಾಗ ಇಡಿ‌ ಆಗಿರೋದು. ಗ್ಯಾರಂಟಿ ಬಗ್ಗೆ ಶ್ವೇತ ಪತ್ರ‌ ಹೊರಡಿಸಲಿ, ಎಷ್ಟು ಜನರಿಗೆ ದುಡ್ಡು ಬಂದಿದೆ? ಗೃಹಲಕ್ಷ್ಮೀ, ಯುವ ನಿಧಿ ಸರಿಯಾಗಿ ಬರ್ತಾ ಇಲ್ಲ, ಬಸ್ ಫ್ರೀ ಅಂತಿರಿ, ಡಿಸೇಲ್ ದರ ಹೆಚ್ಚು ‌ಮಾಡಿದ್ದು ಯಾರು? ಎನರ್ಜಿ ಖಾತೆ ಅರ್ಧದಷ್ಟು ನನ್ನಲಿದೆ. ಮರು ಬಳಕೆ ಇಂಧನವೆ ಹೆಚ್ಚು ಬಳಕೆ ಮಾಡತಾ ಇದಿವಿ, ಕಾಕಾಸಾಹೇಬ, ಮಾಹದೇವಪ್ಪ‌ ನಿನಗೂ ಫ್ರೀ ಅಂದ್ರು, ಮಿಸ್ಟರ್ ಸಿದ್ದರಾಮಯ್ಯ ಉತ್ತರ‌ ಕೊಡಿ ‌೧೫ ಬಾರಿ‌ ಬಜೆಟ್ ಮಾಡಿನಿ‌ ಅಂತಿರಿ ಆರ್ಥಿಕ ಪರಿಸ್ಥಿತಿ ದಿವಾಳಿ ಆಗಿದೆ. ಕೇಂದ್ರದ ಬಗ್ಗೆ ಮಾತಾಡ್ತಿರಿ ಸಿಎಂ ಅವರೇ ಜಿಡಿಪಿ, ಸಾಲದ ಬಗ್ಗೆ ಮಾತಾಡ್ತಿರಿ, ಕಣ್ಣು ತೆರೆದು‌ ನೋಡಿ‌ ನಿಮ್ಮ ಅಧಿಕಾರ ಅವಧಿಯಲ್ಲಿ, ನಮ್ಮ ಅಧಿಕಾರ ‌ಅವಧಿಯಲ್ಲಿ ಏನಾಗಿದೆ‌ ನೋಡಿ, ನಿಮ್ಮ ಬೋಗಸ್ ವಾದ ಒಪ್ಪುವುದಿಲ್ಲ, ಕಾಂಗ್ರೆಸ್ ಹಿಂದೂ ವಿರೋದಿ, ಭ್ರಷ್ಟಾಚಾರ ಪಾರ್ಟಿ ನಿಮ್ಮ ಸಚಿವರ ಪಿಎ ಗಳ‌ ಹೆಸರಿ ಬರೆದಿಟ್ಟು ಆತ್ಮಹತ್ಯೆ ‌ಮಾಡಿಕೊಳ್ತಿದಾರೆ, ಸರಕಾರದ ಕಾರ್ಯದರ್ಶಿಯೇ ಪತ್ರ‌ ಬರೆದು ವಕ್ಫ ‌ಆಸ್ತಿ ವಶಪಡಿಸಿಕೊಳ್ಳುತ್ತಿದ್ದಾರೆ, ವಾಲ್ಮೀಕಿ ಹಗರಣದ ಫಲಾನುಭವಿ‌ ತುಕಾರಂ, ೧೮೭ ಕೋಟಿ ಅಲ್ಲ, ೮೯ ಕೋಟಿ ಅಂತಾ ಹೇಳ್ತಿರಿ. ಸ್ವಾಮಿ ಇಷ್ಟು ‌ತಿಂದ್ರು ಅದ‌, ಅಷ್ಟು ‌ತಿಂದ್ರು ಅದ. ಅನ್ವರ ಮಾನಪಾಡೆ ವರದಿಯಲ್ಲಿದೆ, ಹ್ಯಾರೀಸ್, ಖಮರುಲ್ಲಾ ಇಸ್ಲಾಂ, ರಹೀಂಖಾನ್ ಅವರೇ ವಕ್ಫ ‌ಆಸ್ತಿಗೆ‌ ವಿರೋಧ ಮಾಡಿದ್ದರು ಎಂದರು. ಮುಖಂಡರಾದ ಡಾ.ಅಶ್ವಥನಾರಾಯಣ, ಎನ್. ರವಿಕುಮಾರ್, ಪ್ರತಾಪಸಿಂಹ‌ ಇದ್ದರು.

Exit mobile version