Home ಅಪರಾಧ ರೈಲು ಡಿಕ್ಕಿ ಹೊಡೆದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

ರೈಲು ಡಿಕ್ಕಿ ಹೊಡೆದ ಸ್ಥಿತಿಯಲ್ಲಿ ವ್ಯಕ್ತಿಯ ಮೃತದೇಹ ಪತ್ತೆ

0

ಬಂಟ್ವಾಳ: ರೈಲು ಡಿಕ್ಕಿಯಾಗಿ ಸಾವನ್ನಪ್ಪಿರುವ ಸ್ಥಿತಿಯಲ್ಲಿ ವ್ಯಕ್ತಿಯೋರ್ವನ ಮೃತದೇಹ ಬಿ.ಸಿ. ರೋಡಿನ ರೈಲ್ವೆ ಹಳಿಯಲ್ಲಿ ಪತ್ತೆಯಾಗಿದೆ.
ಮೃತರನ್ನು ಬಿ.ಸಿ.ರೋಡಿಗೆ ಸಮೀಪದ ‌ಕಾಮಾಜೆ ನಿವಾಸಿ ಕರುಣಾಕರ(35)ಎಂದು ಗುರುತಿಸಲಾಗಿದೆ. ಮರದ ಕೆಲಸ ಮಾಡುತ್ತಿದ್ದ ಅವರು ಮನೆಗೆ ಆಧಾರಸ್ತಂಭವಾಗಿದ್ದರು. ಎರಡು ವರ್ಷಗಳ ‌ಹಿಂದೆಯಷ್ಟೇ ವಿವಾಹವಾಗಿದ್ದ ಮೃತರಿಗೆ, ಒಂದು ವರ್ಷದ ಹೆಣ್ಣುಮಗುವಿದೆ.
11 ಗಂಟೆಯ ಸುಮಾರಿಗೆ ಸಂಚರಿಸುತ್ತಿದ್ದ ರೈಲು ಡಿಕ್ಕಿಯಾಗಿರಬೇಕೆಂದು ಶಂಕಿಸಲಾಗಿದೆ. ಬಿ.ಸಿ.ರೋಡಿನ ರೈಲ್ವೆ ಸ್ಟೇಷನ್‌ ಸಮೀಪದಲ್ಲಿ ಕುತ್ತಿಗೆ ಹಾಗೂ ದೇಹ ಬೇರ್ಪಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ಸ್ಥಳಕ್ಕೆ ಬಂಟ್ವಾಳ ‌ನಗರ ಹಾಗೂ ರೈಲ್ವೆ ಇಲಾಖೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Exit mobile version