Home ಅಪರಾಧ ರಿಮ್ಸ್ ಮೆಡಿಕಲ್ ವಿದ್ಯಾರ್ಥಿನಿ ಕಾಣೆ: ಮರುದಿನ ಸಂಪರ್ಕಕ್ಕೆ

ರಿಮ್ಸ್ ಮೆಡಿಕಲ್ ವಿದ್ಯಾರ್ಥಿನಿ ಕಾಣೆ: ಮರುದಿನ ಸಂಪರ್ಕಕ್ಕೆ

0

ರಾಯಚೂರು: ರಾಯಚೂರು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ(ರಿಮ್ಸ್) ಹೆರಿಗೆ ಅಧ್ಯಯನ ಮಾಡುತ್ತಿದ್ದ ವಿದ್ಯಾರ್ಥಿನಿ ನಾಪತ್ತೆಯಾಗಿರುವ ಘಟನೆ ಶನಿವಾರ ನಡೆದಿದ್ದು, ರವಿವಾರ ಸಂಜೆ ಫೋನ್ ಸಂಪರ್ಕಕ್ಕೆ ಸಿಕ್ಕಿರುವ ಘಟನೆ ನಡೆದಿದೆ. ಕಲಬುರಗಿ ಮೂಲದ ಎಂಎಸ್ ವಿದ್ಯಾರ್ಥಿನಿ ಕಾಣೆಯಾಗಿದ್ದರು. ೧೫ ದಿನಗಳ ಹಿಂದೆ ವೈದ್ಯಕೀಯ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆದಿದ್ದರು. ಸ್ನೇಹಿತರ ಮನೆಗೆ ಹೋಗುವುದಾಗಿ ಹೇಳಿ ತೆರಳಿದ್ದು, ರಾತ್ರಿ ಎಂಟು ಗಂಟೆಯಾದರೂ ಮರಳಿ ಬಂದಿರಲಿಲ್ಲ. ಹಾಸ್ಟೆಲ್ ವಾರ್ಡ್‌ನ ಸೂಪರ್‌ವೈಸರ್‌ಗೆ ಮಾಹಿತಿ ನೀಡಿದ್ದಾರೆ. ಅವರು ಕರೆ ಮಾಡಿದರೂ ಸಂಪರ್ಕಕ್ಕೆ ಸಿಕ್ಕಿರಲಿಲ್ಲ. ಪಾಲಕರಿಗೆ ಮಾಹಿತಿ ನೀಡಿದ್ದು, ಅವರು ರವಿವಾರ ಕಾಲೇಜಿಗೆ ಆಗಮಿಸಿದ್ದಾರೆ. ಮಗಳ ಫೋನ್ ಸ್ವಿಚ್ ಆಫ್ ಆಗಿದಕ್ಕೆ ಆತಂಕಗೊಂಡ ಪೋಷಕರು ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಕಾಲೇಜಿಗೆ ಆಗಮಿಸಿದ ಪೊಲೀಸರು ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದು, ವಿಭಾಗದ ಮುಖ್ಯಸ್ಥರು ಸಹಪಾಠಿಗಳಿಂದ ಮಾಹಿತಿ ಸಂಗ್ರಹಿಸಿದ್ದಾರೆ. ರವಿವಾರ ಸಂಜೆ ಕಾಣೆಯಾದ ವಿದ್ಯಾರ್ಥಿನಿ ಫೋನ್ ಸಂಪರ್ಕಕ್ಕೆ ಸಿಕ್ಕಿದ್ದು, ನಾನು ಬೆಂಗಳೂರಿಗೆ ತೆರಳುತ್ತಿರುವುದಾಗಿ ತಿಳಿಸಿದ್ದಾಗಿ ಕಾಲೇಜಿನ ಅಧೀಕ್ಷಕರು ತಿಳಿಸಿದ್ದಾರೆ.

Exit mobile version