Home ನಮ್ಮ ಜಿಲ್ಲೆ ಚಿಕ್ಕಮಗಳೂರು ರಾಮಮಂದಿರ ಉದ್ಘಾಟನೆ ಭಾರತದ ಹಬ್ಬ

ರಾಮಮಂದಿರ ಉದ್ಘಾಟನೆ ಭಾರತದ ಹಬ್ಬ

0

ಚಿಕ್ಕಮಗಳೂರು: ರಾಮಮಂದಿರ ಉದ್ಘಾಟನೆ ಭಾರತದ ಹಬ್ಬ ಎಂದು ಮಾಜಿ ಸಿ.ಎಂ ಎಚ್.ಡಿ ಕುಮಾರಸ್ವಾಮಿ ಬಣ್ಣಿಸಿದ್ದಾರೆ.

ಚಿಕ್ಕಮಗಳೂರು ತಾಲೂಕಿನ ಹೊಸಪೇಟೆ ಸಮೀಪದ ಹನಿ ಡ್ಯೂ ರೆಸಾರ್ಟ್‌ ನಲ್ಲಿ ಮಂಡ್ಯ ಜಿಲ್ಲೆಯ ಜಿಡಿಎಸ್ ಶಾಸಕರು ಮುಖಂಡರೊಂದಿಗೆ ವಾಸ್ತವ್ಯ ಹೂಡಿ ದಿಢೀರ್ ಬೆಂಗಳೂರಿಗೆ ತೆರಳುವ ವೇಳೆ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದರು.

ನಿಜವಾದ ರಾಮರಾಜ್ಯ ಎಂಬ ಜನಾಭಿಪ್ರಾಯಕ್ಕೆ ನಾನೂ ದನಿಗೂಡಿಸುತ್ತೇನೆ ಎಂದಿರುವ ಅವರು ರಾಮಮಂದಿರ ನಿರ್ಮಾಣ ದೇಶದ ಜನರ ನಿರೀಕ್ಷೆಯಾಗಿತ್ತು ಎಂದರು.

ಕಾಂಗ್ರೆಸ್ ನವರು ರಾಮಮಂದಿರ ಉದ್ಘಾಟನೆಗೆ ಹೋಗದಿರುವ ನಿರ್ಧಾರ ಅವರ ಪಕ್ಷದ ತೀರ್ಮಾನವಾಗಿದ್ದು ಹೋಗದಿರುವುದಕ್ಕೆ ಕಾರಣ ಅವರೇ ಹೇಳಬೇಕು ಎಂದರು.

ರಾಜ್ಯದಲ್ಲಿ ಬಿಜೆಪಿ ಜೊತೆಗಿನ ಮೈತ್ರಿ ಬಗ್ಗೆ ಮಾಜಿ ಸಿ.ಎಂ ಎಚ್. ಡಿ ಕುಮಾರಸ್ವಾಮಿ ಪ್ರತಿಕ್ರಿಯಿಸಿದ್ದು ಕಾಂಗ್ರೆಸ್ ಜೊತೆಗಿನ ಮೈತ್ರಿಗಿಂತ ಬಿಜೆಪಿ ಜೊತೆ ಮೈತ್ರಿಗೆ ಅಜಗಜಾಂತರ ವ್ಯತ್ಯಾಸ ಇದೆ ಎಂದು ಹೇಳಿದರು.

ಬಿಜೆಪಿ ಜೊತೆಗಿನ ಮೈತ್ರಿಯಲ್ಲಿ ಕೇಸರಿ ಪಕ್ಷದ ಜೊತೆ ಯಾವುದೇ ವಿಶ್ವಾಸದ ಕೊರತೆ ಇಲ್ಲ , ಖುಷಿ ಇದೆ, ಬಿಜೆಪಿ ಜೆಡಿ ಎಸ್ ನದ್ದು ಒಂದು ರೀತಿ ನ್ಯಾಚುರಲ್ ಅಲಾಯನ್ಸ್ ಎನಿಸುತ್ತಿದೆ ಎಂದಿರುವ ಅವರು ಬಿಜೆಪಿ ಪಕ್ಷದ ಸ್ನೇಹಿತರ ವಿಶ್ವಾಸ ಪಡೆಯಲು ಸೂಕ್ಷ್ಮವಾಗಿ ಚರ್ಚಿಸಲು ನಮ್ಮ ಪಕ್ಷದ ಕಾರ್ಯಕರ್ತರಿಗೆ ಸಭೆ ಮಾಡುತ್ತಿದ್ದೇವೆ, ಕೆಲವೆಡೆ ಸ್ಥಳೀಯವಾಗಿ ಎರಡೂ ಪಕ್ಷಗಳ ನಾಯಕರ ಜೊತೆಗಿನ ಸಮಸ್ಯೆ ಬಗೆಹರಿಸುತ್ತೇವೆ ಎಂದರು.

ಸಂಕ್ರಾಂತಿ ನಂತರ ಮೈತ್ರಿಯ ಔಟಚಿಕ್ಕಮಗಳೂರುಷವಾಗಲಿದೆ ಎಂದು ತಿಳಿಸಿ, ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಸಾಮಾನ್ಯ ಕಾರ್ಯಕರ್ತ ಸ್ಪರ್ಧಿಸಿದರೂ ಗೆಲ್ಲುವ ಸಾಧ್ಯತೆ ಇದೆ ಆದರೆ ಕಳೆದ ಬಾರಿ ಕಾಂಗ್ರೆಸ್ ನಮಗೆ ಕೇವಲ 2-3 ಪರ್ಸೆಂಟ್ ಮಾತ್ರ ಸಹಕಾರ ನೀಡಿತ್ತು ಎಂದು ಆರೋಪಿಸಿದರು.

ಮಂಡ್ಯದಲ್ಲಿ ತಮ್ಮ ಸ್ಪರ್ಧೆ ಬಗ್ಗೆ ಪ್ರತಿಕ್ರಿಯಿಸಿದ ಅವರು ಮೈತ್ರಿ ನಂತರ ಪರಿಸ್ಥಿತಿ ಏನಾಗುತ್ತೋ ನೋಡೋಣ ಎಂದರು. ಸುಮಲತಾ ಸ್ಪರ್ಧೆ ಬಗ್ಗೆ ಸಹಾ ಬಿಜೆಪಿ ಜೊತೆಗಿನ ಹೊಂದಾಣಿಕೆ ಮುಗಿದ ಮೇಲೆ ಚರ್ಚೆ ತೀರ್ಮಾನ ಆಗಲಿದೆ ಎಂದರು.

Exit mobile version