Home ತಾಜಾ ಸುದ್ದಿ ರಾತ್ರಿ ಇಡೀ ಡಿಸಿ ಕಚೇರಿ ಮುಂದೆ ಮಲಗಿದ ರಾಮುಲು

ರಾತ್ರಿ ಇಡೀ ಡಿಸಿ ಕಚೇರಿ ಮುಂದೆ ಮಲಗಿದ ರಾಮುಲು

0

ಬಳ್ಳಾರಿ: ಎಸ್ಟಿ ಅಭಿವೃದ್ಧಿ ನಿಗಮದ ನೂರಾರು ಕೋಟಿ ರೂಪಾಯಿ ದುರ್ಬಳಕೆ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಬಿಜೆಪಿ ಎಸ್ಟಿ ಮೋರ್ಚಾ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಮುಷ್ಕರ ರಾತ್ರಿ ಇಡೀ ಮುಂದುವರಿದಿದೆ.
ಮಾಜಿ ಸಚಿವ ರಾಮುಲು ರಾತ್ರಿ ಇಡೀ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಹಾಕಿರುವ ಶಾಮಿಯಾನ ದಡಿಯೇ ಮಲಗಿ ಪ್ರತಿಭಟಿಸಿದ್ದಾರೆ.
ಅವರೊಂದಿಗೆ ಸಿರುಗುಪ್ಪ ಮಾಜಿ ಶಾಸಕ ಸೋಮಲಿಂಗಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಮೋಕ ಅನಿಲ್ ಸೇರಿದಂತೆ ಹಲವು ಮುಖಂಡರು ಧರಣಿಯಲ್ಲಿ ಭಾಗಿಯಾದರು.

Exit mobile version