Home ತಾಜಾ ಸುದ್ದಿ ರಾಜಕೀಯ ದುರುದ್ದೇಶದಿಂದ ಪಾದಯಾತ್ರೆ

ರಾಜಕೀಯ ದುರುದ್ದೇಶದಿಂದ ಪಾದಯಾತ್ರೆ

0

ಬಾಗಲಕೋಟೆ: ದೋಸ್ತಿ ಪಕ್ಷಗಳಲ್ಲಿ ಏನೇನು ಆಗುತ್ತದೆ ಎಂಬುದು ನೊಡುತ್ತಿರಿ. ಈ ಹಿಂದೆಯೂ ಜೆಡಿಎಸ್‌ನವರು ದೋಸ್ತಿ ಮಾಡಿದ್ದರು. ಏನಾಯಿತು ಎಂಬುದನ್ನು ರಾಜ್ಯದ ಜನ ನೋಡಿದ್ದಾರೆ ಎಂದು ಗೃಹ ಸಚಿವ ಜಿ.ಪರಮೇಶ್ವರ ಹೇಳಿದರು.
ಜಿಲ್ಲೆಯ ಬೀಳಗಿ ತಾಲೂಕಿ ಬಾಡಗಂಡಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯ ದುರುದ್ದೇಶದಿಂದ ನಮ್ಮ ವಿರುದ್ಧ ಪಾದಯಾತ್ರೆ ಮಾಡಲು ಹೊರಟಿದ್ದ ಬಿಜೆಪಿ-ಜೆಡಿಎಸ್ ದೋಸ್ತಿಯಲ್ಲಿ ಮುಂದೆ ಏನೇನು ಆಗುತ್ತದೆ ಎಂಬುವುದನ್ನು ರಾಜ್ಯದ ಜನರೇ ನೋಡಲಿದ್ದಾರೆ ಎಂದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಸಮರ್ಥವಾಗಿ ಕೆಲಸ ಮಾಡುತ್ತಿದ್ದಾರೆ. ರಾಜ್ಯದಲ್ಲಿ ಐದು ವರ್ಷ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿರಲಿದೆ. ಇದರಲ್ಲಿ ಯಾರಿಗೂ ಅನುಮಾನ ಬೇಡ ಎಂದು ಸ್ಪಷ್ಟಪಡಿಸಿದ ಅವರು, ಸಿದ್ದರಾಮಯ್ಯ ಅವರೇ ೫ ವರ್ಷ ಸಿಎಂ ಆಗಿ ಮುಂದುವರೆಯುತ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಲಿಲ್ಲ.

Exit mobile version