Home ನಮ್ಮ ಜಿಲ್ಲೆ ಯಾವುದೇ ಸರ್ಕಾರ ಇರಲಿ ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು

ಯಾವುದೇ ಸರ್ಕಾರ ಇರಲಿ ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು

0

ರಾಯಚೂರು : ಯಾವುದೇ ಸರ್ಕಾರ ಇರಲಿ ಜನರಿಗೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು. ಇದು ನಮ್ಮ ಸಂವಿಧಾನದ ಮೂಲ ಆಶಯ ಎಂದು ರಾಯಚೂರು ನಗರದಲ್ಲಿ ಸ್ಪೀಕರ್ ಯು.ಟಿ ಖಾದರ್ ಹೇಳಿದರು.

ಕೇಂದ್ರಸರಕಾರದ ವಿರುದ್ಧ ದೆಹೆಲಿಯಲ್ಲಿ ರಾಜ್ಯ ಕಾಂಗ್ರೆಸ್ ಪ್ರತಿಭಟನೆ ವಿಚಾರಕ್ಕೆ ಮಾತನಾಡಿದ ಅವರು, ನಾನು ಸ್ಪೀಕರ್ ಹುದ್ದೆಯಲ್ಲಿದ್ದೇನೆ. ಎಲ್ಲಾ ಶಾಸಕರನ್ನು ಸಮಾನತೆಯಿಂದ ನೋಡಿಕೊಳ್ಳುವುದು. ಸದನವನ್ನು ಸಮರ್ಪಕ ಚರ್ಚೆಗೆ ಅನುಗುಣವಾಗಿ ಒಳ್ಳೆಯ ಕಾನೂನು, ಯೋಜನೆಗಳನ್ನು ರೂಪಿಸಿ, ಉತ್ತಮ ವಾತಾವರಣ ನಿರ್ಮಾಣ ಮಾಡುವುದು ನನ್ನ ಕೆಲಸ ಎಂದರು. ನಾನು ಸಭಾಧ್ಯಕ್ಷನಾಗಿದ್ದೇನೆ ಉಳಿದಂತೆ ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಎರಡೂ ಒಂದೆ ಎಂದರು.

Exit mobile version