Home ತಾಜಾ ಸುದ್ದಿ ಮೂರನೇ ಮಹಡಿಯಿಂದ ಜಿಗಿದ ಡೆಪ್ಯೂಟಿ ಸ್ಪೀಕರ್

ಮೂರನೇ ಮಹಡಿಯಿಂದ ಜಿಗಿದ ಡೆಪ್ಯೂಟಿ ಸ್ಪೀಕರ್

0

ಮುಂಬೈ: ಮಹಾರಾಷ್ಟ್ರ ಡೆಪ್ಯುಟಿ ಸ್ಪೀಕರ್ ನರಹರಿ ಜಿರ್ವಾಲ್ ಸಚಿವಾಲಯದ ಕಟ್ಟಡದ ಮೂರನೇ ಮಹಡಿಯಿಂದ ಕೆಳಗೆ ಜಿಗಿದಿದ್ದಾರೆ.
ಆದರೆ ಛಾವಣಿಯಿಂದ ಕೆಳಗೆ ಜಿಗಿದ ನಂತರ ಯಾವುದೇ ಗಾಯವೂ ಆಗದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಜಿಗಿದ ಬಳಿಕ ಕೆಳಗಿದ್ದ ಬಲೆಯಲ್ಲಿ ಸಿಲುಕಿದ್ದರಿಂದ ಬಚಾವಾಗಿದ್ದಾರೆ. ಬಳಿಕ ಪೊಲೀಸ್ ಸಿಬ್ಬಂದಿ ಅವರನ್ನು ಹೊರಗೆ ಕರೆದೊಯ್ದರು.
ಅಜಿತ್ ಪವಾರ್ ಬಣದ ಶಾಸಕರಾಗಿರುವ ನರಹರಿ ಜಿರ್ವಾಲ್‌ ಅವರು ಸಂಪುಟ ಸಭೆಯ ದಿನ, ಎಲ್ಲಾ ಶಾಸಕರು ಸಿಎಂ ಅವರನ್ನು ಭೇಟಿಯಾಗಬೇಕಿತ್ತು ಆದರೆ ಸಾಕಷ್ಟು ಪ್ರಯತ್ನ ಮಾಡಿದರೂ ಶಿಂಧೆ ಅವರನ್ನು ಭೇಟಿ ಮಾಡಲು ಸಾಧ್ಯವಾಗಲಿಲ್ಲ ಹೀಗಾಗಿ ಕಟ್ಟಡದಿಂದ ಜಿಗಿದಿದ್ದಾರೆ ಎಂದು ಹೇಳಲಾಗುತ್ತಿದೆ.

Exit mobile version