Home ನಮ್ಮ ಜಿಲ್ಲೆ ಚಿಕ್ಕಮಗಳೂರು ಮಾಜಿ ಸಚಿವ ಸಿ.ಟಿ.ರವಿ ದಂಪತಿಯಿಂದ ಮತದಾನ

ಮಾಜಿ ಸಚಿವ ಸಿ.ಟಿ.ರವಿ ದಂಪತಿಯಿಂದ ಮತದಾನ

0

ಚಿಕ್ಕಮಗಳೂರು: ಉಡುಪಿ- ಚಿಕ್ಕಮಗಳೂರು ಲೋಕಸಭಾ ಚುನಾವಣೆ ಮತದಾನ ಪ್ರಕ್ರಿಯೇ ಶುಕ್ರವಾರ ಬೆಳಿಗ್ಗೆಯಿಂದ ಆರಂಭಗೊಂಡಿ ದ್ದು ಜಿಲ್ಲೆಯಲ್ಲಿ ತೆರೆಯಲಾಗಿ ರುವ 1229 ಮತಗಟ್ಟೆಗಳಲ್ಲಿ ಮತದಾರರು ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿದರು.

ಮಾಜಿ ಸಚಿವ ಸಿ.ಟಿ.ರವಿ ಮತ್ತು ಅವರ ಪತ್ನಿ ಪಲ್ಲವಿ ಸಿ.ಟಿ.ರವಿ ಅವರು ನಗರದ ಬಸವನಹಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯಲ್ಲಿನ ತೆರೆಯಲಾಗಿರುವ ಮತಗಟ್ಟೆ ಸಂಖ್ಯೆ 204ರಲ್ಲಿ ಮತದಾನ ಮಾಡಿದರು.

ನಂತರ ಸುದ್ದಿಗಾರರ ಜತೆ ಮಾತನಾಡಿ, ಬಲಿಷ್ಟ ಭಾರತಕ್ಕೆ ಬಲಿಷ್ಟ ನಾಯಕತ್ವ ಬೇಕು. ದೇಶದ ಅಭಿವೃದ್ಧಿ ಮತ್ತು ಬಡವರ ಏಳಿಗೆಗೆ ಶ್ರಮಿಸುತ್ತಿ ರುವ ಮೋದಿ ಅವರಂತ ನಾಯಕತ್ವ ಬೇಕು. ಮತದಾ ರರು ಬಿಜೆಪಿಗೆ ಮತ ನೀಡು ವಂತೆ ಮನವಿ ಮಾಡಿದರು.

Exit mobile version