ಮಾಜಿ ಉಪ ಪ್ರಧಾನಿ ದೇವಿಲಾಲ್ ಅವರ ಪುತ್ರರಾಗಿರುವ ಓಂ ಪ್ರಕಾಶ್ ಚೌಟಾಲಾ, ಐದು ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.
ಚಂಡೀಗಢ: ಹರಿಯಾಣದ ಮಾಜಿ ಮುಖ್ಯಮಂತ್ರಿ ಹಾಗೂ ಭಾರತೀಯ ರಾಷ್ಟ್ರೀಯ ಲೋಕದಳ(INLD) ಮುಖ್ಯಸ್ಥರಾಗಿದ್ದ ಓಂ ಪ್ರಕಾಶ್ ಚೌಟಾಲ ನಿಧನರಾಗಿದ್ದಾರೆ.
ಓಂ ಪ್ರಕಾಶ್ ಚೌಟಾಲಾ ಅವರು ಗುರುಗ್ರಾಮದ ಸ್ವಗೃಹದಲ್ಲಿ ನಿಧನರಾದರು, ಅವರಿಗೆ 89 ವರ್ಷ ವಯಸ್ಸಾಗಿತ್ತು. ಮಾಜಿ ಉಪ ಪ್ರಧಾನಿ ದೇವಿಲಾಲ್ ಅವರ ಪುತ್ರರಾಗಿರುವ ಓಂ ಪ್ರಕಾಶ್ ಚೌಟಾಲಾ, ಐದು ಬಾರಿ ಹರಿಯಾಣದ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದರು.