Home ನಮ್ಮ ಜಿಲ್ಲೆ ಮಹಾರಾಷ್ಟ್ರದಲ್ಲಿ ಭೂಕಂಪ: ಬೀದರ್ ಜಿಲ್ಲೆಯಲ್ಲಿ `ಎಫೆಕ್ಟ್’

ಮಹಾರಾಷ್ಟ್ರದಲ್ಲಿ ಭೂಕಂಪ: ಬೀದರ್ ಜಿಲ್ಲೆಯಲ್ಲಿ `ಎಫೆಕ್ಟ್’

0

ಬೀದರ್ : ಪಕ್ಕದ ಮಹಾರಾಷ್ಟ್ರ ಹಿಂಗೋಲಿ ನಗರದಲ್ಲಿ ಗುರುವಾರ ಬೆಳಿಗ್ಗೆ ಒಂದೇ ಸ್ಥಳದಲ್ಲಿ ಎರಡು ಬಾರಿ ಭೂ ಕಂಪನ ಸಂಭವಿಸಿತು. ಬೆಳಿಗ್ಗೆ ೬.೦೮ ನಿಮಿಷಕ್ಕೆ ಸಂಭವಿಸಿದ ಭೂ ಕಂಪನದ ತೀವ್ರತೆ ರಿಕ್ಟರ್ ಮಾಪನದ ಮೇಲೆ ೪.೫ ಹಾಗೂ ಬೆಳಿಗ್ಗೆ ೬.೧೮ ನಿಮಿಷಕ್ಕೆ ಸಂಭವಿಸಿದ ಇನ್ನೊಂದು ಭೂ ಕಂಪದ ತೀವ್ರತೆ ರಿಕ್ಟರ್ ಮಾಪನದ ಮೇಲೆ ೩.೦೬ ರ ಪ್ರಮಾಣದಲ್ಲಿ ದಾಖಲಾಗಿದೆ.
ಬೀದರ್ ಜಿಲ್ಲೆಯಲ್ಲಿನ ಕೆಲವರಿಗೆ ಭೂ ಕಂಪನದ ಅನುಭವವಾಗಿ ಜಿಲ್ಲೆಯಲ್ಲಿ ಭೂ ಕಂಪನ ಸಂಭವಿಸಿದೆಯೇ ಎಂದು ವಿಚಾರಿಸಿದ್ದಾರೆ ಎಂದು ಬೀದರ್ ಜಿಲ್ಲಾಡಳಿತದಲ್ಲಿನ ಉನ್ನತ ಮೂಲಗಳು ತಿಳಿಸಿವೆ.

Exit mobile version