ರಾವಣನ ಅವತಾರ ತಾಳುವ ಮುನ್ನ ಶಿವನ ದರ್ಶನ ಪಡೆದ ಯಶ್
ನಟ ಯಶ್ ಅವರ ‘ರಾಮಾಯಣ’ ಸಿನಿಮಾದ ಚಿತ್ರಿಕರಣಕ್ಕೂ ಮೊದಲು ಉಜ್ಜಯಿನಿಯ ಮಹಾಕಾಳೇಶ್ವರ ದೇವಾಲಯಕ್ಕೆ ಭೇಟಿ ನೀಡಿದ್ದಾರೆ.
ಮಾದ್ಯಮದವರೊಂದಿಗೆ ಮಾತನಾಡಿದ ಅವರು ಶಿವನ ದರ್ಶನ ಪಡೆದು ಧನ್ಯನಾದೆ, ನಮ್ಮ ಮನೆಯ ದೇವರು ಶಿವ ಎಂದಿದ್ದಾರೆ, ರಾಮಾಯಣ ಚಿತ್ರೀಕರಣದಲ್ಲಿ ನಟ ಯಶ್ ಭಾಗಿಯಾಗಲಿದ್ದು. ಈ ಚಿತ್ರದಕ್ಕೆ ನಿರ್ಮಾಪಕರು ಕೂಡ ಆಗಿದ್ದಾರೆ. ಬಹು ನಿರೀಕ್ಷಿತ ನಿತೇಶ್ ತಿವಾರಿ ನಿರ್ದೇಶನದಲ್ಲಿ ಮೂಡಿ ಬರುತ್ತಿರೋ ರಾಮಾಯಣ ಚಿತ್ರದಲ್ಲಿ ಯಶ್ ರಾವಣನಾಗಿ ನಟಿಸುತ್ತಿದ್ದಾರೆ. ಎರಡು ಭಾಗಗಳಾಗಿ ರಾಮಾಯಣ ಸಿನಿಮಾ ತೆರೆಗೆ ಬರಲಿದೆ. ಮುಂದಿನ ವರ್ಷ ದೀಪಾವಳಿಗೆ ಮೊದಲ ಭಾಗ ಬಿಡುಗಡೆ ಆಗಲಿದೆ. ರಣ್‌ಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ಜೊತೆಗೆ ಘಟಾನುಘಟಿ ಕಲಾವಿದರು ಚಿತ್ರದ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ರಾವಣನಾಗಿ ರಾಕಿಂಗ್ ಸ್ಟಾರ್ ಅಬ್ಬರಿಸುವುದನ್ನು ನೋಡಲು ಸಿನಿರಸಿಕರು ಕಾಯುತ್ತಿದ್ದಾರೆ. 600 ಕೋಟಿ ರೂ. ಬಜೆಟ್‌ನಲ್ಲಿ ಸಿನಿಮಾ ನಿರ್ಮಾಣವಾಗುತ್ತಿದೆ. ಈ ಸಿನಿಮಾದಲ್ಲಿ ರಾಮನಾಗಿ ರಣಬೀರ್ ಕಪೂರ್, ಹನುಮಂತನಾಗಿ ಸನ್ನಿ ದಿಯೋಲ್, ಸೀತೆಯ ಪಾತ್ರದಲ್ಲಿ ಸಾಯಿ ಪಲ್ಲವಿ ನಟಿಸುತ್ತಿದ್ದಾರೆ. ಈ ಚಿತ್ರವು ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗ 2026ರ ದೀಪಾವಳಿಗೆ ಮತ್ತು ಎರಡನೇ ಭಾಗ 2027ರಲ್ಲಿ ತೆರೆಗೆ ಬರಲಿದೆ.
https://www.instagram.com/reel/DIs9ZPIR_w6/?igsh=MTl2NzN2MmdodWxlbA==